Ad Widget

ಸುಳ್ಯ ಫೋಟೊಗ್ರಾಫರ್ ಅಸೋಸಿಯೇಶನ್ ಮಹಾಸಭೆ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದ.ಕ., ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವಾರ್ಷಿಕ ಮಹಾಸಭೆಯು ಜು.23ರಂದು ಸಂಘದ ಅಧ್ಯಕ್ಷ ಹರೀಶ್ ರಾವ್‌ರವರ ಅಧ್ಯಕ್ಷತೆಯಲ್ಲಿ ಸುಳ್ಯದ ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಿತು.

. . . . . . . . .

ಫೋಟೋಗ್ರಾಫರ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಆನಂದ ಎನ್ ಬಂಟ್ವಾಳ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಮಟ್ಟದ ಛಾಯಾ ಸಾಧಕ ಪ್ರಶಸ್ತಿ ಪುರಸ್ಕೃತ ಸುಳ್ಯ ವಲಯದ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

. . . . . . .

ರಾಜ್ ಸೌಂಡ್ಸ್ ಎಂಡ್ ಲೈಟ್ಸ್ ಎಂಬ ತುಳು ಚಿತ್ರದ ನಿರ್ಮಾಪಕರಾದ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ ಎನ್.ಬಂಟ್ವಾಳ ಹಾಗೂ ಉರಗ ತಜ್ಞರಾಗಿ ಗುರುತಿಸಿಕೊಂಡಿರುವ ಫೋಟೋಗ್ರಾಫರ್ ಮೋಹನ್ ಅರಂಬೂರುರನ್ನು ಗೌರವಿಸಲಾಯಿತು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಎಸ್.ಕೆ.ಪಿ. ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಕರುಣಾಕರ ಎಣ್ಣೆಮಜಲು, ಸುಳ್ಯ ವಲಯದ ಗೌರವಾಧ್ಯಕ್ಷ ಪರಮ್ ಸುಳ್ಯ ವೇದಿಕೆಯಲ್ಲಿದ್ದರು.

ವರದಿ ವರ್ಷದಲ್ಲಿ ನೂತನವಾಗಿ ಗೃಹ ನಿರ್ಮಾಣ ಮಾಡಿದ, ವಿವಾಹವಾದ ಹಾಗೂ ಹೊಸ ಸಂಸ್ಥೆ ಆರಂಭಿಸಿದ ವಲಯದ ಸದಸ್ಯರನ್ನು ಗುರುತಿಸಲಾಯಿತು. ಸೆ.4ರಂದು ನಡೆಯುವ ಜಿಲ್ಲಾ ಕ್ರೀಡಾಕೂಟದ ಆಮಂತ್ರಣವನ್ನು ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ್ ವಲಯದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಸಂಘಕ್ಕೆ ನೂತನ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.

ಸುಧಾಕರ ರೈ ಬೆಳ್ಳಾರೆ ಪ್ರಾರ್ಥಿಸಿ, ಲೋಕೇಶ್ ಬಿ.ಎನ್. ಸ್ವಾಗತಿಸಿದರು. ರತೀಶ್ ಬೆಳ್ಳಾರೆ ವರದಿ ವಾಚಿಸಿದರು. ಕೋಶಾಧಿಕಾರಿ ದಿವಾಕರ ಮುಂಡಾಜೆ ಲೆಕ್ಕಪತ್ರ ಮಂಡಿಸಿದರು. ಉದಯಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading