Ad Widget

ದೆಹಲಿಯ ಸ್ವಾತಂತ್ರ್ಯೋತ್ಸವದ ಪೆರೇಡ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನೀಡುವ ರಾಜ್ಯ ತಂಡಕ್ಕೆ ಸುಳ್ಯದ ಕು.ಸಾಹಿತ್ಯ ಆಯ್ಕೆ

ಆಗಸ್ಟ್ ೧೫ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೃತ್ಯ ಪ್ರದರ್ಶನ ನೀಡಲು ಕರ್ನಾಟಕ ರಾಜ್ಯ ತಂಡ ತೆರಳಲಿದ್ದು ಈ ತಂಡದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುಳ್ಯದ ಕು.ಸಾಹಿತ್ಯ ಪುರುಷೋತ್ತಮ್ ಭಾಗವಹಿಸಲಿದ್ದಾರೆ.

ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಬಿಬಿಎ ವಿದ್ಯಾರ್ಥಿನಿಯಾಗಿರುವ ಕು.ಸಾಹಿತ್ಯ ಅಲ್ಲಿಯ ಎನ್.ಸಿ.ಸಿ. ತಂಡದ ವಿದ್ಯಾರ್ಥಿನಿ. ಇತ್ತೀಚೆಗೆ ನಡೆದ ಎನ್.ಸಿ.ಸಿ. ಕ್ಯಾಂಪ್‌ನಲ್ಲಿ ಸಾಹಿತ್ಯ ನೀಡಿದ ನೃತ್ಯ ಪ್ರದರ್ಶನ ಆಯ್ಕೆಗಾರರ ಗಮನ ಸೆಳೆದಿದ್ದರು. ಮಂಗಳೂರು, ಉಡುಪಿ, ಕೊಡಗು ಮೂರು ಜಿಲ್ಲೆಯ ಎನ್‌ಸಿಸಿ ತಂಡದಿಂದ ಇಬ್ಬರು ಆಯ್ಕೆಯಾಗಿದ್ದ ಅವರಲ್ಲಿ ಕು.ಸಾಹಿತ್ಯ ಒಬ್ಬರು. ಸಾಹಿತ್ಯ ಇದೀಗ ಬೆಂಗಳೂರಿನಲ್ಲಿ ರಾಜ್ಯ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದು ಜು.೨೮ರಂದು ಕರ್ನಾಟಕ ತಂಡದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಈಕೆ ಸುಳ್ಯದ ಪಿಗ್ಮಿ ಸಂಗ್ರಾಹಕಿ ಹಾಗೂ ಗಾಯಕಿ ಕೇರ್ಪಳದ ಶ್ರೀಮತಿ ಆರತಿ ಹಾಗೂ ಬೆಳ್ಳಾರೆ ಜ್ಞಾನಗಂಗಾ ವಾಹನ ಚಾಲಕರಾಗಿರುವ ಪುರುಷೋತ್ತಮ್ ದಂಪತಿಯ ಪುತ್ರಿ. ಲೆಫ್ಟಿನೆಂಟ್ ಬಾಮಿ ಅತುಲ್ ಶೆಣೈಯವರು ಎನ್.ಸಿ.ಸಿ. ಶಿಕ್ಷಕರಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!