ಗುತ್ತಿಗಾರಿನ ವಳಲಂಬೆಯ ಹಳ್ಳಿ ವೈದ್ಯೆ ಶ್ರೀಮತಿ ವಿಜಯಲಕ್ಷ್ಮೀ ಕರುವಜೆ ಅವರಿಗೆ ಇಂಟರ್‌ನ್ಯಾಷನಲ್ ಪೀಸ್ ಯುನಿವರ್ಸಿಟಿ ವತಿಯಿಂದ ಡಾಕ್ಟರ್ ಆಪ್ ಏನ್ಶಿಯಂಟ್ ಇಂಡಿಯನ್ ಮೆಡಿಸಿನ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಬಾಲ್ಯದಿಂದಲೇ ಔಷಧಿ ಸಸ್ಯ ವಿಶೇಷಗಳಲ್ಲಿ ಆಸಕ್ತಿಯನ್ನು ಹೊಂದಿದ್ದ ವಿಜಯ ಲಕ್ಷ್ಮಿಯವರು ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಪಾರಂಪರಿಕ ಔಷಧ ಪದ್ಧತಿಯನ್ನು ಅಭ್ಯಸಿಸಿದ್ದರು. ಸಂತಾನ ಇಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡಿ ಅದೆಷ್ಟೋ ಸಂತಾನ ಭಾಗ್ಯಕ್ಕೆ ಔಷಧಿ ನೀಡಿದ್ದಾರೆ.
ಎಲುಬು ಸವೆತ, ಚರ್ಮರೋಗ, ಸ್ತ್ರಿ ರೋಗಗಳಿಗೆ ಚಿಕಿತ್ಸೆ ನೀಡಿದವರು. ಪಾರಂಪರಿಕ ವೈದ್ಯಪದ್ದತಿಯಲ್ಲಿ ಅಮೂಲಾಗ್ರ ಸೇವೆ ಸಲ್ಲಿಸಿದ್ದಾರೆ.
ವಿಜಯಲಕ್ಷ್ಮಿಯವರು ಕೇಶವ ಜೋಯಿಷ ಕರುವಜೆ ಅವರ ಪತ್ನಿ, ಶಿವ ಸುಬ್ರಹ್ಮಣ್ಯ ಜೋಯಿಸ, ಶ್ರೀ ಕೃಷ್ಣ ಶರ್ಮ, ಆಂಗೀರಸ ಪುತ್ರರು. ಪುತ್ರಿ ಶ್ರೀಮತಿ ವಿದ್ಯಾ.