Ad Widget

‘ಪತ್ರಕರ್ತರ ಮಿತ್ರ’ ಕೋಟೆ ವಸಂತಕುಮಾರ್ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಪ್ರೆಸ್ ಕ್ಲಬ್ ಕಟ್ಟಡಕ್ಕೆ ದೇಣಿಗೆ

ಸುಳ್ಯ:’ಪತ್ರಕರ್ತರ ಮಿತ್ರ’ ಎಂದೇ ಖ್ಯಾತರಾಗಿದ್ದ ಸಾಹಿತಿ, ಸಂಘಟಕ ದಿ.ಕೋಟೆ ವಸಂತಕುಮಾರ್ ಅವರ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ರೂ ದೇಣಿಗೆ ನೀಡಿದ್ದಾರೆ.

. . . . . . . . .

ಫೌಂಡೇಷನ್ನ ಪದಾಧಿಕಾರಿಗಳಾದ ಕೋಟೆ ವಸಂತಕುಮಾರ್ ಅವರ ಪತ್ನಿ ಪಾರ್ವತಿ ಕೋಟೆ,‌ ಮಕ್ಕಳಾದ ಶಶಿಕಲಾ ಗಣಪಯ್ಯ, ಶಶಿಧರ ಕೋಟೆ, ರಘುರಾಮ ಕೋಟೆ ಹಾಗು ಗಣಪಯ್ಯ ವನಶ್ರೀ, ಸೀತಾ ಕೋಟೆಯವರು ಅನುದಾನ ನೀಡಿದ್ದಾರೆ. ಪಾರ್ವತಿ ವಸಂತಕುಮಾರ್ ಕೋಟೆಯವರು 50,000 ಚೆಕ್‌ನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರಿಗೆ ಹಸ್ತಾಂತರ ಮಾಡಿದರು.

. . . . . . .

ಈ ಸಂದರ್ಭ ಗಣಪಯ್ಯ ಭಟ್ ವನಶ್ರೀ, ಶಶಿಕಲಾ ಗಣಪಯ್ಯ ಭಟ್, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಖಜಾಂಜಿ ಯಶ್ವಿತ್ ಕಾಳಮನೆ, ನಿರ್ದೇಶಕರಾದ ಜೆ.ಕೆ.ರೈ, ಗಿರೀಶ್ ಅಡ್ಪಂಗಾಯ, ಪದ್ಮನಾಭ ಮುಂಡೋಕಜೆ, ತೇಜೇಶ್ವರ ಕುಂದಲ್ಪಾಡಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading