Ad Widget

ಕೊಲ್ಲಮೊಗ್ರ ಮತ್ತು ಶಿರೂರು ಚಾಂತಾಳ ಒಕ್ಕೂಟ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರ “ಎ” ಮತ್ತು ಶಿರೂರು ಚಾಂತಾಳ “ಬಿ” ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು. 04 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು.

. . . . . . . . .

ಅಯ್ಯಪ್ಪ ಪೂಜಾ ಮಂದಿರದ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಕಿರಿಭಾಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕೊಪ್ಪಡ್ಕ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ ಹಾಗೂ ದ.ಕ.ಜಿ.ಪ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ ವಹಿಸಿದ್ದಲ್ಲದೆ ವೇದಿಕೆಯಲ್ಲಿ ಕೊಲ್ಲಮೊಗ್ರ “ಎ” ಒಕ್ಕೂಟದ ನಿರ್ಗಮಿತ ಅಧ್ಯಕ್ಷರಾದ ಜನಾರ್ದನ ದೋಣಿಪಳ್ಳ, ಶಿರೂರು ಚಾಂತಾಳ “ಬಿ” ಒಕ್ಕೂಟದ ನಿರ್ಗಮಿತ ಅಧ್ಯಕ್ಷರಾದ ಶ್ರೀಮತಿ ಯಶೋಧ ಅಂಬೆಕಲ್ಲು, ಕೊಲ್ಲಮೊಗ್ರ “ಎ” ಒಕ್ಕೂಟದ ನೂತನ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಶಿರೂರು ಚಾಂತಾಳ “ಬಿ” ಒಕ್ಕೂಟದ ನೂತನ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಚಾಳೆಪ್ಪಾಡಿ ಉಪಸ್ಥಿತರಿದ್ದರು.

. . . . . . .

ಈ ಸಂದರ್ಭದಲ್ಲಿ ಕೊಲ್ಲಮೊಗ್ರ “ಎ” ಹಾಗೂ ಶಿರೂರು ಚಾಂತಾಳ “ಬಿ” ಒಕ್ಕೂಟದ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸರ್ವಸದಸ್ಯರುಗಳು ಹಾಗೂ ಸೇವಾಪ್ರತಿನಿಧಿಗಳಾದ ಶೋಭಾ, ಪದ್ಮಾವತಿ, ಸುಶ್ಮಿತ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 09 ವರ್ಷಗಳಿಂದ ಕೊಲ್ಲಮೊಗ್ರದಲ್ಲಿ ಸೇವೆ ಸಲ್ಲಿಸಿ ಕಲ್ಮಕಾರಿಗೆ ವರ್ಗಾವಣೆಯಾದ ಸೇವಾಪ್ರತಿನಿಧಿ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭವನ್ನು ಚಂದ್ರಶೇಖರ ಕೋನಡ್ಕ ಸ್ವಾಗತಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ರಾಜೇಶ್.ಕೆ ನಿರೂಪಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading