ಬಹುಕಾಲದ ನಿರೀಕ್ಷೆಯಲ್ಲಿರುವ ಸಂಪಾಜೆ ಗ್ರಾಮ ಪಂಚಾಯತ್ ಘನತ್ಯಾಜ್ಯ ಘಟಕದ ಬೇಡಿಕೆ ಸಾರ್ವಜನಿಕರಲ್ಲಿದ್ದು ಇದೀಗ ಇಂದು ಸ್ಥಳ ಪರಿಶೀಲನೆ ಮಾಡಲು ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್ ಸಂಪಾಜೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆಯನ್ನು ನಡೆಸಿ ಬೇಡಿಕೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳ ಒದಗಿಸಲು ಹಲವು ವರ್ಷಗಳಿಂದ ಬೇಡಿಕೆಯನ್ನು ಸ್ಥಳೀಯ ಸಾರ್ವಜನಿಕರು ಸಲ್ಲಿಸಿದ್ದರು ಇದೀಗ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಿದಾಗ ಇಲಾಖೆ ಗಮನ ಹರಿಸಿದೆ . ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಶಿವಕುಮಾರ್ .ಸುಂದರ. ಗ್ರಾ ಪಂ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಗ್ರಾ ಪಂ ಸದಸ್ಯ ಷನ್ಮುಗಂ ,ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ, ಕಾರ್ಮಿಕ ಮುಖಂಡರಾದ ಜೋನಿ ಕೆ. ಪಿ , ಜನಶೀಲನ್ ರಾಜು , ಹನೀಫ್ ಎಸ್.ಕೆ. , ಭರತ್ ನಂದಾ ಬಾಚಿಗದ್ದೆ ಉಪಸ್ಥಿತರಿದ್ದರು . ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಸ್ಮಶಾನ ಸ್ಥಳ , ಸಬ್ ಸ್ಟೇಷನ್ ಸ್ಥಳದ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದಾಗ ಸಬ್ ಸ್ಟೇಷನ್ ಸ್ಥಳ ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಘನ ತ್ಯಾಜ್ಯ ಘಟಕದ ಬಗ್ಗೆಯೂ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ನೀಡುವುದಾಗಿ ತಿಳಿಸಿದರು ಎನ್ನಲಾಗಿದೆ.
- Friday
- November 22nd, 2024