Ad Widget

ಆಲೆಟ್ಟಿ ಸದಾಶಿವ ದೇವಳದಲ್ಲಿ ಯಕ್ಷಗಾನ ಸೇವೆಯಾಟ : ಶ್ರೀ ದೇವಿ ಮಹಾತ್ಮೆಯನ್ನು ಕಣ್ತುಂಬಿಕೊಂಡ ಜನ

ಆಲೆಟ್ಟಿ ಗ್ರಾಮದ ಬಾಳೆಬಲ್ಪು ಭವಾನಿಶಂಕರ ರವರ ಸೇವೆಯಾಟ ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಪ್ರಥಮ ಸೇವೆಯಾಟವಾಗಿ ಎ.27.ರಂದು ನಡೆಯಿತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ ಕಲಾವಿದರ ಕೂಡುವಿಕೆಯಿಂದ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ನಡೆಸಲಾಯಿತು. ರಾತ್ರಿ ಗಂಟೆ 8.30 ರಿಂದ ಚೌಕಿ ಪೂಜೆಯು ನಡೆದು ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು. ಊರ ಪರ ಊರ ಕಲಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನ ವೀಕ್ಷಿಸಿದರು. ಪರಮೇಶ್ವರ ನಾಯ್ಕ್ ಮತ್ತು ಮನೆಯವರು ಆಗಮಿಸಿದ ‌ಎಲ್ಲರನ್ನು ಸ್ವಾಗತಿಸಿದರು. ರಂಗ ಮಂಟಪವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದೇವಳದ ಆವರಣವನ್ನು ವಿದ್ಯುಧ್ದೀಪಗಳಿಂದ ಶೃಂಗಾರ ಮಾಡಲಾಗಿತ್ತು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!