ಕೊಲ್ಲಮೊಗ್ರು ಗ್ರಾಮದ ಮೋಹನಾಂಗಿ ದೇವಿದಾಸ್ ಕಜ್ಜೋಡಿ ಅವರ ಜಾಗದಲ್ಲಿದ್ದ ನಾಗನ ಕಟ್ಟೆಯು ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.25 ರಂದು ನಾಗಪ್ರತಿಷ್ಠಾ ಕಲಶವು ನಡೆಯಿತು.
ಎ.24 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ಥೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ, ಜಲಾಧಿವಾಸ, ಪ್ರಾಕಾರ ಬಲಿ ಹಾಗೂ ಪ್ರಸಾದ ವಿತರಣೆ ನಡೆಯಿತು.
ಎ.25 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿ, ಪಂಚವಿಂಶತಿ ಕಲಶ ಪೂಜೆ ಹಾಗೂ ದಿವಾ ಗಂಟೆ 8:23 ರಿಂದ 9:32 ರ ಶುಭ ಮುಹೂರ್ತದಲ್ಲಿ “ನಾಗಪ್ರತಿಷ್ಠೆ” ಪಂಚಾಮೃತ ಅಭಿಷೇಕ, ಪಂಚವಿಂಶತಿ ಸಾನಿಧ್ಯ ಕಲಶಾಭೀಷೇಕ, ತಂಬಿಲ ಸೇವೆ ನಡೆಯಿತು.
ನಂತರ ಮದ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ವರದಿ :- ಉಲ್ಲಾಸ್ ಕಜ್ಜೋಡಿ