ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ.08 ರಂದು ಬೃಹತ್ ನದಿ ಸ್ವಚ್ಛತಾ ಅಭಿಯಾನ ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಎ.28 ರಂದು ಶ್ರೀ ಮಯೂರ ಕಲಾಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು.
ಸುಮಾರು 20 ಕಿಲೋಮೀಟರ್ ನಷ್ಟು ನದಿ ಸ್ವಚ್ಛತಾ ಕಾರ್ಯ ನಡೆಯಲಿದ್ದು, ಕಡಮಕಲ್ಲುವಿನಿಂದ ಹರಿದು ಬರುವ ಹೊಳೆ ಹಾಗೂ ಕೂಜುಮಲೆಯಿಂದ ಹರಿದು ಬರುವ ಹೊಳೆಯ ಉಗಮದಿಂದ ತಲಾ 5 ಕಿಲೋಮೀಟರ್ ನಂತೆ ಹಾಗೂ ಕಲ್ಮಕಾರಿನಿಂದ ಎರಡೂ ನದಿಗಳು ಸೇರಿ ಹರಿಯುವ ಗೌರಿ ಹೊಳೆ ಹರಿಹರ ಪಲ್ಲತ್ತಡ್ಕ ದವರೆಗೆ 10 ಕಿಲೋಮೀಟರ್ ಹೀಗೆ ಸುಮಾರು 20 ಕಿಲೋಮೀಟರ್ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಪೂರ್ವಭಾವಿ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸಂಯೋಜಕ ಸತೀಶ್.ಟಿ.ಎನ್, ಶಿವರಾಮ ಮಾಸ್ತರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಡ್ಯಾನಿ ಯಳದಾಳು, ಪುಷ್ಪರಾಜ್ ಪಡ್ಪು, ಸುರೇಶ್.ಪಿ.ಎಸ್, ಚಂದ್ರಶೇಖರ ಕೊಂದಾಳ, ಸೇವಾಪ್ರತಿನಿಧಿಗಳಾದ ಸಾವಿತ್ರಿ ಹಾಗೂ ಶೋಭಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ