Ad Widget

ಕೊಲ್ಲಮೊಗ್ರು-ಹರಿಹರ ಸೊಸೈಟಿಯ ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡ ಉದ್ಘಾಟನೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡ ಉದ್ಘಾಟನಾ ಸಮಾರಂಭವು ಎ.25 ರಂದು ನಡೆಯಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯಾ ನಾಮಫಲಕ ಅನಾವರಣ ಮಾಡಿದರು. ನಂತರ ಶ್ರೀ ಮಯೂರ ಕಲಾಮಂದಿರ ಕೊಲ್ಲಮೊಗ್ರು ಇಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನುಪ್ ಮಲ್ಲಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಪಲ್ಲತ್ತಡ್ಕ ಮಂಡಲ ಪಂಚಾಯತ್ ನ ಮಾಜಿ ಪ್ರಧಾನರಾದ ಕೆ.ವಿ.ಸುಧೀರ್ ಕೂಜುಗೋಡು ಕಟ್ಟೆಮನೆ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪಿ.ಸಿ.ಜಯರಾಮ, ಬ್ಯಾಂಕ್ ಆಫ್ ಬರೋಡಾ ದ ನಿವೃತ್ತ ಮ್ಯಾನೇಜರ್ ಶ್ರೀಮತಿ ಉಷಾ ಭವಾನಿಶಂಕರ ಪಿಂಡಿಮನೆ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿಗಳಾದ ನಾರಾಯಣ ಪುಳಿಕುಕ್ಕು ಹಾಗೂ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ದಾಮೋದರ.ಕೆ.ಎಸ್, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಹರ್ಷಕುಮಾರ್.ಡಿ.ಯಸ್, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ಹರ್ಷ ಮುಂಡಾಜೆ, ಕೆ.ಪಿ.ಗಿರಿಧರ ಕಿರಿಭಾಗ, ಬಿ.ಆರ್.ಉಮೇಶ್ ಬಿಳಿಮಲೆ, ಲೋಕಯ್ಯ ಗೌಡ ಕು.ಸಿ.ಕುಂಞೇಟಿ, ಶೇಷಪ್ಪ ಗೌಡ ಮಣಿಯಾನಮನೆ, ಕೆ.ವಿ.ಜಿ ಪ್ರೌಢಶಾಲೆ ಕೊಲ್ಲಮೊಗ್ರು ಇದರ ಸಂಚಾಲಕರಾದ ಕಮಲಾಕ್ಷ ಮುಳುಬಾಗಿಲು, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಶ್ರೀಮತಿ ಉಷಾ ಪ್ರಭಾಕರ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು, ಪ್ರಗತಿಪರ ಕೃಷಿಕರುಗಳಾದ ಕೆ.ಯಸ್.ಸದಾಶಿವಯ್ಯ ಪನ್ನೆ, ಕೆ.ಪಿ.ಚಂದ್ರಶೇಖರ ಕೊಪ್ಪಡ್ಕ, ಕೆ.ಎಂ.ಜಕ್ರಿಯಾ ಚಾಂತಾಳ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಣಿಕಂಠ ಕೊಳಗೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶೇಷಪ್ಪ ಗೌಡ, ದ.ಕ.ಜಿ.ಕೇ.ಸ ಬ್ಯಾಂಕ್ ಗುತ್ತಿಗಾರು ವಲಯ ಮೇಲ್ವಿಚಾರಕರಾದ ಮನೋಜ್ ಕುಮಾರ್.ಎಂ.ಪಿ ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಹರ್ಷಕುಮಾರ್ ದೇವಜನ, ಕೆ.ಯಸ್.ಗಿರೀಶ್ ಕಟ್ಟೆಮನೆ, ಶ್ರೀಮತಿ ವಿಜಯ.ಕೆ.ಜೆ. ಕೂಜುಗೋಡು, ಕೆ.ಸುರೇಶ್ ಚಾಳೆಪ್ಪಾಡಿ, ಕೆ.ಮೋನಪ್ಪ ಕೊಳಗೆ, ಎ.ಎಂ.ಶೇಖರ ಅಂಬೆಕಲ್ಲು, ತಾರಾನಾಥ ಮುಂಡಾಜೆ, ಶ್ರೀಮತಿ ವಿಜಯಾ ಶಿವರಾಮ ಕಜ್ಜೋಡಿ, ರಾಜೇಶ್.ಪಿ.ಯಸ್ ಪರಮಲೆ, ಬೊಳಿಯ ಬೆಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . .

ಈ ಸಂದರ್ಭದಲ್ಲಿ ವೈದ್ಯಕೀಯ ಸೇವೆಗಾಗಿ ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ, ಸ್ಥಳ ದಾನಿಗಳಾದ ಕಮಲಾಕ್ಷ ಮುಳುಬಾಗಿಲು, ಮಾದ್ಯಮ ಕ್ಷೇತ್ರದ ಸಾಧನೆಗಾಗಿ ಕೊಡಲ್ಪಡುವ “ಆರ್.ಎಲ್ ವಾಸುದೇವರಾವ್” ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ಭೀಮಗುಳಿ, ಸಾರ್ವಜನಿಕ ಸೇವೆಗಾಗಿ ಶಿವರಾಜ್ ಕಟ್ಟ, ಚಾರ್ಟಡ್ ಅಕೌಂಟೆಂಟ್ ಕು| ಕಾವ್ಯಶ್ರೀ, ಕಟ್ಟಡ ನಿರ್ವಹಣೆಗಾಗಿ ಡಿ.ಜನಾರ್ದನ ಚಾಳೆಪ್ಪಾಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಆರ್.ಟಿ.ಸಿ ಚಾಲಕರಾದ ಚಾಲಕರಾದ ಶ್ರೀಧರ ಕೆರೆಕ್ಕೋಡಿ, ಕಟ್ಟಡ ಕಂಟ್ರಾಕ್ಟರ್ ಬಿಜು ಇವರುಗಳನ್ನು ಸನ್ಮಾನಿಸಲಾಯಿತು. ಹಾಗೂ 1980 ರ ದಶಕದಲ್ಲಿ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖೆಯ ಕಟ್ಟಡ ನಿರ್ಮಾಣಕ್ಕೆ 10 ಸೆಂಟ್ಸ್ ಜಾಗವನ್ನು ನೀಡಿದ ದಿವಂಗತ ವೆಂಕಪ್ಪ ಗೌಡ ಮಾಣಿಬೆಟ್ಟು ಅವರ ಪರವಾಗಿ ಅವರ ಮೊಮ್ಮಗ ಕಿರಣ್ ಮಾಣಿಬೆಟ್ಟು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿವರ್ಗ ಸೇರಿದಂತೆ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಹರ್ಷಕುಮಾರ್ ದೇವಜನ ಸ್ವಾಗತಿಸಿ ಎಂ.ಎ. ಶೇಖರ ಅಂಬೆಕಲ್ಲು ವಂದಿಸಿದರು. ನಿತ್ಯಾನಂದ ಭೀಮಗುಳಿ, ವಿದ್ಯಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!