ಸುಳ್ಯದ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಶ್ರೀ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನ ಮತ್ತು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ.3 ರಂದು ಕೇಶವ ಕೃಪಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು ವೇದ ಯೋಗ ಮತ್ತು ಕಲೆಗಳ ಉಳಿವಿಗಾಗಿ ತನ್ನದೇ
ಕೊಡುಗೆಯನ್ನು ನೀಡುತ್ತಿರುವ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಸುಮಾರು ಒಂದು ತಿಂಗಳ ವೇದ ಯೋಗ ಕಲಾ ಶಿಬಿರವನ್ನು ಆಯೋಜಿಸುತ್ತಿದ್ದು, ಈ ವರ್ಷದ ಶಿಬಿರವು ಏಪ್ರಿಲ್ 12 ರಿಂದ ಆರಂಭಗೊಂಡಿದ್ದು ಮೇ 3 ರಂದು ಸಮಾಪನಗೊಳ್ಳಲಿದೆ. ರಾಜ್ಯ ಮತ್ತು ಹೊರ ರಾಜ್ಯದ 120 ಶಿಬಿರಾರ್ಥಿಗಳು ಇದರ ಸದುಪಯೋಗ
ಪಡೆದುಕೊಳ್ಳುತ್ತಿದ್ದಾರೆ. ವಸ್ತ್ರ, ಪುಸ್ತಕಗಳು, ವ್ಯಾಸಪೀಠವೂ ಸೇರಿದಂತೆ ಸಂಪೂರ್ಣ ಉಚಿತ ಶಿಬಿರ ಇದಾಗಿದೆ. ವೇದಾಧ್ಯಯನ,
ಯೋಗಾಭ್ಯಾಸ, ಕ್ರೀಡೆ, ಈಜು ತರಬೇತಿ, ಅಗ್ನಿಶಾಮಕ
ಪ್ರಾತ್ಯಕ್ಷಿಕೆ , ಜಾದೂ, ಮಿಮಿಕ್ರಿ, ಭಜನೆ ಇನ್ನಿತರ ಬೌದ್ಧಿಕ – ಭೌತಿಕ ವಿಕಾಸ ಪ್ರಕ್ರಿಯೆಗೆ ಸಂಬಂಧಿಸಿದ ಕಲಿಕೆಯ ಜೊತೆ ಮನೋರಂಜನ ಚಟುವಟಿಕೆಗಳು ಈ ಶಿಬಿರದಲ್ಲಿ ಒಳಗೊಂಡಿದೆ ಎಂದು ಅವರು ವಿವರಿಸಿದರು. ಶಿಬಿರದ ಸಂಚಾಲಕ ಅಭಿರಾಮ ಶರ್ಮಾ ಮಾತನಾಡಿ ಮೇ 3 ರಂದು ಅ.3ರಿಂದ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರಿನ ಸ್ವರ್ಣೋದ್ಯಮಿ ಹಾಗು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ ಸಂಸ್ಕೃತ ಉಪನ್ಯಾಸಕ ಪಿ.ವಿ.ಶ್ರೀಹರಿ ಶರ್ಮಾ ಪಾದೆಕಲ್ಲು ಅಭಿನಂದನಾ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ. ಪ್ರತಿವರ್ಷ ಪ್ರತಿಷ್ಠಾನದವತಿಯಿಂದ ವೇದ, ಯೋಗ ಮತ್ತು ಕಲಾ ಕ್ಷೇತ್ರದಿಂದ ಆರಿಸಿದ ಮೂವರು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದ್ದು ಈ ಬಾರಿ ಜ್ಯೋತಿಷ್ಯ ಕ್ಷೇತ್ರದಿಂದ ಬ್ರಹ್ಮಶ್ರೀ ಶ್ರೀಧರ ಗೋರೆ, ಯೋಗ ಕ್ಷೇತ್ರದಿಂದ ಆರ್.ವಿ. ಭಂಡಾರಿ ಬೆಂಗಳೂರು, ಕಲಾ ಕ್ಷೇತ್ರದಿಂದ ಸಂಗೀತ ವಿದ್ವಾಂಸ ಯಜೇಶ್ ಆಚಾರ್ ಸುಬ್ರಹ್ಮಣ್ಯ ,ಇವರಿಗೆ
ಶ್ರೀ ಕೇಶವ ಸೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸರಣಿ ಶಿವಪೂಜಾ ಅಭಿಯಾನದ ಸಂಚಾಲಕ ಗೋಪಾಲಕೃಷ್ಣ ಭಟ್ ಉಬರಡ್ಕ ಹಾಗು ಯೋಗ ಗುರು ಎಂ.ಎಸ್. ನಾಗರಾಜ ರಾವ್ ಉಪಸ್ಥಿತರಿದ್ದರು.
- Friday
- November 1st, 2024