ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರು ಬಿ ಒಕ್ಕೂಟ ಶಿರೂರು ಚಾಂತಾಳದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಎ.10 ರಂದು ರಚನೆ ಮಾಡಲಾಯಿತು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಇಂದಿರಾ ಚಾಳೆಪ್ಪಾಡಿ, ಉಪಾಧ್ಯಕ್ಷರಾಗಿ ಹೇಮಂತ್ ಚಾಳೆಪ್ಪಾಡಿ, ಕಾರ್ಯದರ್ಶಿಯಾಗಿ ಕಾರ್ತಿಕ್ ಅಡ್ನೂರುಮಜಲು, ಜತೆ ಕಾರ್ಯದರ್ಶಿಯಾಗಿ ಸಾವಿತ್ರಿ ಕಲ್ಲೇಮಠ, ಕೋಶಾಧಿಕಾರಿಯಾಗಿ ಗಿರಿಧರ ಅಂಬೆಕಲ್ಲು ಇವರುಗಳು ಆಯ್ಕೆಯಾದರು.
ಹಾಗೂ ನೂತನ ಉಪಸಮಿತಿ ಸದಸ್ಯರುಗಳಾಗಿ ಸುಮತಿ.ಸಿ ಚಾಳೆಪ್ಪಾಡಿ, ಜಯಮಾಲಾ ತಂಬಿನಡ್ಕ, ಸುಮತಿ.ಎಸ್ ಬೆಂಡೋಡಿ, ಸರಸ್ವತಿ ಬೆಂಡೋಡಿ, ಪವಿತ್ರ ದೋಲನಮನೆ ಇವರುಗಳು ಆಯ್ಕೆಯಾದರು.
ಹಾಗೂ ನೂತನ ದಾಖಲಾತಿ ಸಮಿತಿ ಸದಸ್ಯರುಗಳಾಗಿ ಹೇಮಲತಾ ಬೆಂಡೋಡಿ, ಧರ್ಮಪಾಲ ದೋಲನಮನೆ, ಭರತ್ ಕೊರಂಬಟ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಮಾಹಿತಿ ನೀಡಿದರು.
ವರದಿ :- ಉಲ್ಲಾಸ್ ಕಜ್ಜೋಡಿ