Ad Widget

ಜಾಲತಾಣದಲ್ಲಿ ಅಪಪ್ರಚಾರ – ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆ ಮಾಲಕರಿಂದ ದೂರು

ಸುಳ್ಯದ ಕುಂಕುಂ ಪ್ಯಾಶನ್ ವಸ್ತ್ರ ಮಳಿಗೆ ಮತ್ತು ಮಾಲಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಸಂಸ್ಥೆ ಮಾಲಕರು ಪೋಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ.

. . . . . . . . .

ಸುಳ್ಯದ ಶುಭ ಕಾಂಪ್ಲೆಕ್ಸ್ ನಲ್ಲಿ ಕುಂಕುಂ ಫ್ಯಾಷನ್ ರೆಡಿಮೇಡ್ ಬಟ್ಟೆ ಮಾರಾಟ ಸಂಸ್ಥೆಯನ್ನು ನನ್ನ ಸಹೋದರನ ಜತೆ ನಡೆಸುತ್ತಿದ್ದು ಎರಡು ತಿಂಗಳ ಹಿಂದೆ ಭಾರತ ನಕ್ಷೆ ಇರುವ ಚಿತ್ರವನ್ನು ನನ್ನ ಮೊಬೈಲ್ ಸ್ಟೇಟಸ್ ಹಾಕಿದ್ದೆ. ಈ ಸ್ಟೇಟಸನ್ನು ಯಾರೋ ಅಪರಿಚಿತರು ಎಡಿಟ್ ಮಾಡಿ ಸಂಸ್ಥೆ ಹಾಗೂ ನಮ್ಮ ಕುರಿತು ಅಪಪ್ರಚಾರ ಮಾಡಿದ್ದಾರೆ. ನಮ್ಮ ಸಂಸ್ಥೆ ಯ ವ್ಯಾಪಾರ ಅಭಿವೃದ್ಧಿ ಸಹಿಸದ ವ್ಯಕ್ತಿಗಳು ನಮ್ಮ ಸಂಸ್ಥೆ ಹೆಸರಿನಲ್ಲಿ ಅವಹೇಳನಕಾರಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿರುವುದರಿಂದ ನೋವುಂಟಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಮತ್ತು ದೇಶಿಯ ಕರೆಗಳು ಬರುತ್ತಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಹಾಗೂ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕರೆಬಂದಿರುವ ದೂರವಾಣಿ ಸಂಖ್ಯೆಗಳು ಹಾಗೂ ವಾಟ್ಸಾಪ್ ದಾಖಲೆಗಳನ್ನಿಟ್ಟು ಸಂಸ್ಥೆಯ ಪಾಲುದಾರರಾದ ಧನ್ ರಾಮ್ ದೂರು ನೀಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading