ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇದರ ವತಿಯಿಂದ ನಡೆಯುವ 4 ದಿನಗಳ ಬೇಸಿಗೆ ಶಿಬಿರವು ಇಂದು ಉದ್ಘಾಟನೆಗೊಂಡಿತು. ಈ ದಿನ ಪೂ.9.30ಕ್ಕೆ ಸ್ಕೌಟ್ಸ್ ಗೈಡ್ಸ್ ಧ್ವಜಾರೋಹಣ ನಡೆಸಲಾಯಿತು.
ಆ ಬಳಿಕ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮುರುಳ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ “ಎಳವೆಯಲ್ಲೇ ಶಿಸ್ತು,ಸಹಕಾರ ಮತ್ತು ಸಮಾಜ ಸೇವೆ ಮೊದಲಾದ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸುವುದು ಸ್ಕೌಟ್ಸ್ ಗೈಡ್ಸ್ ಚಳುವಳಿಯ ಮುಖ್ಯ ಉದ್ದೇಶವಾಗಿದ್ದು ,ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು” ಎಂದು ಶುಭ ಹಾರೈಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಸಂಸ್ಥೆಯ ಪ್ರಯೋಜನ ನಮಗೆ ದೊರೆಯದೇ ಇದ್ದರೂ ನಮ್ಮ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿರುವುದು ಸಂತಸದ ವಿಷಯ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ಹೇಳಿದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಸುಮಿತ್ರಾರವರು ಅಂತಾರಾಷ್ಟ್ರೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ, ಎಲ್ಲರೂ ಕ್ರಿಯಾಶೀಲರಾಗಿ ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಲು ತಿಳಿಸಿದರು. ಸ್ಕೌಟ್ಸ್ ಮಾಸ್ಟರ್ ಶ್ರೀ ಲಿಂಗಪ್ಪ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಸ್ಕೌಟ್ ಮಾಸ್ಟರ್ ಶ್ರೀ ರಾಮಚಂದ್ರ ಗೌಡ ಸ್ವಾಗತಿಸಿ, ಶಾಲಾ ವಿಜ್ಞಾನ ಶ್ರೀಮತಿ ಸಾವಿತ್ರಿ.ಕೆ ವಂದಿಸಿದರು.