ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರು ಒಕ್ಕೂಟದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಎ.04 ರಂದು ರಚನೆ ಮಾಡಲಾಯಿತು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ತೀರ್ಥರಾಮ ದೋಣಿಪಳ್ಳ, ಉಪಾಧ್ಯಕ್ಷರಾಗಿ ಯೋಗೀಶ್ ಶಿವಾಲ, ಕಾರ್ಯದರ್ಶಿಯಾಗಿ ಮಾಲಾಶ್ರೀ ಜಾಲುಮನೆ, ಜತೆ ಕಾರ್ಯದರ್ಶಿಯಾಗಿ ಅನಿತಾ ಬೊಂಬಿಲ ಹಾಗೂ ಕೋಶಾಧಿಕಾರಿಯಾಗಿ ಕುಮುದಾಕ್ಷಿ ಪನ್ನೆ ಆಯ್ಕೆಯಾದರು.
ಹಾಗೂ ನೂತನ ಉಪಸಮಿತಿ ಸದಸ್ಯರುಗಳಾಗಿ ಲೋಕೇಶ್ ತಂಬಿನಡ್ಕ, ಮಮತಾ ಕೊಂದಾಳ, ಯಶವಂತ ಕಾಜಿಮಡ್ಕ, ಕವಿತಾ ಗಡಿಕಲ್ಲು, ಚೇತನ್ ಬೊಂಬಿಲ ಇವರುಗಳನ್ನು ಆಯ್ಕೆ ಮಾಡಲಾಯಿತು.
ಹಾಗೂ ದಾಖಲಾತಿ ಸಮಿತಿ ಸದಸ್ಯರುಗಳಾಗಿ ತೇಜಸ್ವಿನಿ ಮೊಟ್ಟೆಮನೆ, ಜಯಪ್ರಕಾಶ್ ದೋಣಿಪಳ್ಳ, ಚೇತನ್ ಮಿತ್ತೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಮಾಹಿತಿ ನೀಡಿದರು.
ವರದಿ :- ಉಲ್ಲಾಸ್ ಕಜ್ಜೋಡಿ