ಪುತ್ತೂರಿನಲ್ಲಿ ಕಾರ್‍ಯಾಚರಿಸುತ್ತಿರುವ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ಮೂರನೇ ಶಾಖೆ ಸುಳ್ಯದ ಶ್ರೀರಾಮಪೇಟೆ ಸಾಯಿ ರಾಮ್ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಗಣೇಶ್ ಮತ್ತು ಫುಲ್ಲಾ ಗಣೇಶ್‌ರವರ ಪುತ್ರಿ ಕುಮಾರಿ ತನಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ, ಸ್ಥಳೀಯ ಉದ್ಯಮಿ ಎಸ್ ಎ ಅಬ್ದುಲ್ ಹಮೀದ್ ಜಯನಗರ , ಸ್ಥಳೀಯರಾದ ಪದ್ಮನಾಭ ಭಂಡಾರಿ, ಶ್ರೀಮತಿ ಪಾರ್ವತಿ, ಶ್ರೀಮತಿ ಶೇಷಮ್ಮ, ಮಂಗಳೂರು ರೈಲ್ವೆ ವಿಭಾಗದ ಕೆ.ಡಿ ಸಿಂದೆ, ಸತ್ಯಪ್ರಸಾದ್, ರಶ್ಮಿತಾ, ಸಿಬ್ಬಂದಿಗಳಾದ ರಮ್ಯಾ, ಅಕ್ಷತಾ, ನಿಕಿತಾ, ಹಾಗೂ ಉದ್ಘಾಟನಾ, ಅರುಣ್ ಬೆಟ್ಟಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಲಕರು ಸಂಸ್ಥೆಯು ಅನೇಕ ವಿದ್ಯಾರ್ಥಿ ಮತ್ತು ಪೋಷಕರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡು ಅತ್ಯುತ್ತಮ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಕಂಪ್ಯೂಟರ್ ಶಿಕ್ಷಣ, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, ವೃತ್ತಿಪರ ಕೋರ್ಸುಗಳ ವೇಶಕ್ಕೆ ಅನುವು ಮಾಡಿಕೊಡುವುದರಲ್ಲಿ ಈ ಶಿಕ್ಷಣ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡಿದೆ. ಇದರ ಜೊತೆಗೆ ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯನ್ನು ಮಾಡುವ ಅಬಾಕಸ್ ಶಿಕ್ಷಣವನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡುತ್ತಿದೆ. ಮಕ್ಕಳ ಸಂಪೂರ್ಣ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿರುವ ಅಬಾಕಸ್ ಶಿಕ್ಷಣದಿಂದ ಅಲ್ಪಾವದಿಯಲ್ಲಿ ತ್ವರಿತ ಉತ್ತರಗಳನ್ನು ಕೆಲವೇ ಸೆಕೆಂಡುಗಳಲ್ಲಿ ನೀಡುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಅಬಾಕಸ್ ಇಂಟರ್ ನ್ಯಾಷನಲ್ ಸ್ಪರ್ದೆಯಲ್ಲಿ ಮೂವರು ಮಕ್ಕಳು ಚಾಂಪಿಯನ್ ಆಫ್ ಚಾಂಪಿಯನ್ ಅವಾರ್ಡ್ ಪಡೆದು ದೇಶಕ್ಕೇ ಕೀರ್ತಿಯನ್ನು ತಂದಿರುತ್ತಾರೆ. ಇದು ಅವರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಮಾಡಿದ ಸಾಧನೆಯಾಗಿ ಹೆಗ್ಗಳಿಕೆಯನ್ನು ಪಡೆದಿರುತ್ತದೆ ಎಂದು ಹೇಳಿದರು. ಈ ಸಂಸ್ಥೆಯಲ್ಲಿ ಸುಸಜ್ಜಿತ ಕ್ಲಾಸ್ ರೂಂಗಳು, ಅನುಭವೀ ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳಿಂದ ತರಬೆತಿ, ಉತ್ತಮವಾದ ವಾತಾವರಣ, ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಕ್ವಿಜ್‌ಗಳು, ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅಣುಕು ಪರೀಕ್ಷೆಗಳು, ವಿದ್ಯಾರ್ಥಿಗಳ ಜೊತೆ ನಿರಂತರ ಸ್ತಾವನೆ ಇದುವೇ ಇಲ್ಲಿನ ವಿಶೇಷತೆ ಪ್ರತೀ ವಿದ್ಯಾರ್ಥಿಯನ್ನು ಉದ್ಯೊಗದತ ಬ್ಯಾಂಕಿಂಗ್ ವೇಶ ಪರೀಕ್ಷೆ ಮತ್ತು ವೃತ್ತಿಪರ ವೇಶ ಪರೀಕ್ಷೆಗಳಿಗೆ ಅತ್ಯಂತ ಪೂರಕವೆನಿಸುವ ವೇದ ಗಣಿತವನ್ನು ಕೂಡ ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯಿಸಿರುವುದು ಗಮನಾರ್ಹ. ಕ್ಯಾಲ್ಕುಲೇಟರ್‌ನ ಉಪಯೋಗವಿಲ್ಲದೇ ಕೇವಲ ೩೦ ಸೆಕೆಂಡುಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಬಿಡಿಸಲು ಶಕ್ತರಾಗಿದ್ದಾರೆ. ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತಾ ಸಮಾಜದ ಪ್ರತಿ ವ್ಯಕ್ತಿಗೂ ಉಚಿತ ಉದ್ಯೋಗ ಮಾಹಿತಿಯನ್ನು ನೀಡುತ್ತಾ ಬರುತ್ತಿದೆ.
ಸುಳ್ಯದಲ್ಲಿ ತನ್ನ ಹೊಸ ಶಾಖೆಯನ್ನು ಪ್ರಾರಂಭಿಸಿರುವ ಸಂಸ್ಥೆಯು ಶುಭಾರಂಭದ ಪ್ರಯುಕ್ತ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸನ್ನು ಆಯ್ಕೆ ಮಾಡಿಕೊಂಡ ವಿದ್ಯಾಥಿಗಳಿಗೆ ಸಂಪೂರ್ಣ ಉಚಿತ ಸ್ಪರ್ಧಾತ್ಮಕ ಪ್ರ್ರವೇಶ ಪರೀಕ್ಷಾ ತರಬೇತಿಯನ್ನು ನೀಡುತ್ತದೆ ಎಂದು ಹೇಳಿದರು.