Ad Widget

ಕಟ್ಟ ಗೋವಿಂದನಗರ : ನೂತನ ಒಕ್ಕೂಟ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಟ್ಟ ಗೋವಿಂದನಗರ ಒಕ್ಕೂಟದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಮಾ.27 ರಂದು ರಚನೆ ಮಾಡಲಾಯಿತು.
ನೂತನ ಒಕ್ಕೂಟದ ಅಧ್ಯಕ್ಷರಾಗಿ ಮಣಿಕಂಠ ಕಟ್ಟ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಕಟ್ಟ, ಕಾರ್ಯದರ್ಶಿಯಾಗಿ ಸದಾಶಿವ ಕಟ್ಟ, ಜತೆ ಕಾರ್ಯದರ್ಶಿಯಾಗಿ ಪದ್ಮಯ್ಯ ಕೊಳಗೆ ಹಾಗೂ ಕೋಶಾಧಿಕಾರಿಯಾಗಿ ವಸಂತಿ ಕಟ್ಟ ಆಯ್ಕೆಯಾದರು.
ಹಾಗೂ ನೂತನ ಉಪಸಮಿತಿ ಸದಸ್ಯರುಗಳಾಗಿ ಸೌಮ್ಯ ಕೊಳಗೆ, ಅನಿತಾ ಕಟ್ಟ, ಗಂಗಾಧರ ಕಟ್ಟ, ಯಶೋಧ ಕೊಳಗೆ, ಶೇಖರ ಕಟ್ಟ ಇವರುಗಳನ್ನು ಆಯ್ಕೆ ಮಾಡಲಾಯಿತು.
ಹಾಗೂ ದಾಖಲಾತಿ ಸಮಿತಿ ಸದಸ್ಯರುಗಳಾಗಿ ನಳಿನಿ ತುಪ್ಪಟ, ಹೃತಿಕ್ ಕಟ್ಟ, ಗೀತಾ ಕೊಳಗೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿಗಳಾದ ಚೆನ್ನಕೇಶವ ಹಾಗೂ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಮಾಹಿತಿ ನೀಡಿದರು.

. . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!