ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಸುಬ್ರಹ್ಮಣ್ಯ ವಲಯದ ಏನೆಕಲ್ಲು ಹಣ ಸಂಗ್ರಹಣಾ ಕೇಂದ್ರದಲ್ಲಿ ಡಿಜಿಟಲ್ ಸೇವಾ ಕೇಂದ್ರವನ್ನು ಏನೆಕಲ್ಲು ಸಹಕಾರಿ ಬ್ಯಾಂಕ್ ನ ಅದ್ಯಕ್ಷ ಭವಾನಿಶಂಕರ ಪೂಂಬಾಡಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟಪೂರ್ವ ಅದ್ಯಕ್ಷರಾದ ಶಿವಪ್ರಸಾದ್ ಮಾದನಮನೆ ಶುಭ ಹಾರೈಸಿದರು.
ಅಶೋಕ್ ನೆಕ್ರಾಜೆಯವರು ಲ್ಯಾಪ್ ಟಾಪ್ ಹಸ್ತಾಂತರ ಮಾಡಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಮೋಹನ್ ಗೌಡ ಕೋಟಿ ಗೌಡನ ಮನೆ, ಭವ್ಯಾ ಮೋಹಿತ್ ಜೇನುಕೋಡಿ, ಜಯಂತಿ ಪರಮಲೆ, ಶಶಿಕಲಾ, ಪುಷ್ಪಲತಾ ಯೋಜನಾ ಕಛೇರಿಯ ಹಣಕಾಸು ಪ್ರಬಂಧಕರಾದ ಅತಿಶ್ ಅವರು ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ನೋಡೆಲ್ ಅಧಿಕಾರಿ ಪ್ರಶಾಂತ್, ಗ್ರಾಮ ಮಟ್ಟದ ಕಾರ್ಯನಿರ್ವಾಹಕಿ ಅನುಸೂಯ, ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್, ಒಕ್ಕೂಟದ ಪದಾಧಿಕಾರಿಗಳಾದ ಮಹಾಬಲ ಗುಡ್ಡೆಮನೆ, ರಂಜನ್ ಕುಮಾರ್, ನಿಕಟಪೂರ್ವ ಅದ್ಯಕ್ಷರುಗಳಾದ ವಿಶ್ವನಾಥ್ ಕೆಬ್ಬೋಡಿ, ಧನಂಜಯ ಕೆಬ್ಬೋಡಿ, ಸೇವಾ ಪ್ರತಿನಿಧಿಗಳಾದ ತಾರಾ, ಸಂಧ್ಯಾ ಹಾಗೂ ಸುಬ್ರಹ್ಮಣ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹರಿಣಾಕ್ಷಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ