ತಿಳಿದು ತಿಳಿದು ಮಾಡಿದ ತಪ್ಪು, ಅಳೆದು ತೂಗಿ ನೀಡಿದ ದಾನ ನಿನ್ನ ಬದುಕ ಹಾದಿಯಲ್ಲಿ ಎಂದೂ ಒಳಿತು ಮಾಡದು…
ಸ್ವಾರ್ಥದಿಂದ ಮಾಡಿದ ಸೇವೆ, ಸುಳ್ಳಿನಿಂದ ಕಟ್ಟಿದ ಅರಮನೆ ಹೆಚ್ಚು ಕಾಲ ಉಳಿಯದು ಇಲ್ಲಿ ಓ ಗೆಳೆಯ…
ಮನದ ಒಳಗೆ ವಿಷವ ತುಂಬಿ ಹೊರಗೆ ಸಿಹಿಯ ನೀಡುವಂತೆ ನಟಿಸಿದರೆ ಏನು ಫಲವೋ ಓ ಗೆಳೆಯ…
ತಿಳಿದು ತಿಳಿದು ತಪ್ಪನೆಂದೂ ಮಾಡಲೆಬೇಡ ನೀನು ಅಳೆದು ತೂಗಿ ದಾನವನ್ನು ನೀಡಲೆಬೇಡ…
ನಿಸ್ವಾರ್ಥದಿಂದ ನೀನು ದಾನ-ಧರ್ಮ ಮಾಡು ಇಲ್ಲಿ, ಹೆಸರಿಗಾಗಿ ದಾನ-ಧರ್ಮ ಮಾಡಲೆಬೇಡ…
ತಿಳಿದು ತಿಳಿದು ತಪ್ಪನೆಂದೂ ಮಾಡಲೆಬೇಡ ನೀನು, ನಿನ್ನ ಒಂದು ತಪ್ಪಿನಿಂದ ನೋವು ಪಡುವವರು ಯಾರೋ, ಕಷ್ಟ ಪಡುವವರು ಯಾರೋ, ತಿಳಿದುಕೊ ಓ ಗೆಳೆಯ, ಅರಿತುಕೊ ಓ ಗೆಳೆಯ…
ಸ್ವಾರ್ಥದಿಂದ ಸೇವೆಯನೆಂದೂ ಮಾಡಲೆಬೇಡ ನೀನು ಸುಳ್ಳಿನಿಂದ ಅರಮನೆಯನ್ನು ಕಟ್ಟಲೆಬೇಡ…
ಸ್ವಾರ್ಥದಿಂದ ಮಾಡಿದ ಸೇವೆ ಪುಣ್ಯವನ್ನು ನೀಡದು ನಿನಗೆ, ನಿಸ್ವಾರ್ಥದ ಸೇವೆಯೆಂದೂ ಕೈಯನ್ನು ಬಿಡದು ನಿನ್ನ ಕಷ್ಟದಲ್ಲಿ ಕೈ ಹಿಡಿಯುವುದು…
ಸುಳ್ಳಿನಿಂದ ಅರಮನೆಯನ್ನು ಕಟ್ಟಲೆಬೇಡ ನೀನು, ಒಂದು ದಿನ ಆ ಅರಮನೆಯು ಸುಟ್ಟು ಭಸ್ಮವಾಗುವುದಂತೆ, ಎಲ್ಲರಿಗೂ ತಿಳಿಯುವುದಂತೆ, ಜಗದೆದುರು ಕಾಣುವುದಂತೆ…
ಮನದ ಒಳಗೆ ವಿಷವ ತುಂಬಿ ಹೊರಗೆ ಸಿಹಿಯ ನೀಡುವಂತೆ ನಟಿಸಲೇಬೇಡ ನೀನು…
ನಿನ್ನ ನಟನೆ ಮುಖವಾಡವು ಕಳಚಿ ಬೀಳುವುದಂತೆ, ಬಹಿರಂಗವಾಗುವುದಂತೆ, ಜಗದೆದುರು ಬರುವುದಂತೆ…
ಇಂದು ನೀನು ಮಾಡಿದ ಕರ್ಮ ಮುಂದೆ ನಿನಗೆ ಸಿಗುವುದಂತೆ…
ಒಳ್ಳೆ ಕೆಲಸದ ಫಲವು ಎಂದೂ ಸಿಹಿಯಾಗಿ ಇರುವುದಂತೆ…
ಯಾರೇ ಏನೇ ಅಂದರೂ ನೀನು ಒಳ್ಳೆಯ ಕೆಲಸವ ಮಾಡು, ಅವರಿವರ ಕೊಂಕು ಮಾತು ಕೇಳಲೆಬೇಡ ನೀನು…
ಎಷ್ಟೇ ಕಷ್ಟವಾದರೂ ನೀನು ನಿಸ್ವಾರ್ಥದಿಂದ ಬದುಕು, ನಿನ್ನರಸಿ ಬಂದವರ ಕಷ್ಟಗಳಿಗೆ ಸ್ಪಂದಿಸು…
ನೀ ಮಾಡಿದ ಸಹಾಯವನ್ನು ನೆನಪಿನಲ್ಲಿ ಇರಿಸಬೇಡ, ನೀ ಪಡೆದ ಸಹಾಯವನ್ನು ಎಂದೂ ಮರೆಯಬೇಡ, ಬದುಕಿನಲ್ಲಿ ಎಂದೂ ಮರೆಯಬೇಡ…
ನಿನ್ನ ಎಲ್ಲಾ ಕಷ್ಟಗಳಿಗೂ ಕೊನೆಯೆಂಬುದು ಇರುವುದಂತೆ, ನಿನ್ನ ನಿಸ್ವಾರ್ಥವು ನಿನ್ನ ಕೈಯನ್ನು ಹಿಡಿಯುವುದಂತೆ…
ಏನೇ ಕಷ್ಟ ಬಂದರೂ ನೀನು ದಾನ-ಧರ್ಮ ಬಿಡಲೆಬೇಡ, ಎಷ್ಟೇ ನೋವು ಬಂದರೂ ನೀನು ನಿಯತ್ತನ್ನು ಮರೆಯಬೇಡ…
ಕಷ್ಟ-ನೋವು ಎಲ್ಲಾ ಇಲ್ಲಿ ಬಂದು ಹೋಗೊ ಅದ್ಯಾಯ, ಬದುಕಿನಲಿ ಬಂದು ಹೋಗೊ ಅದ್ಯಾಯ…
“ನಾವು ಇಂದು ಏನು ಮಾಡುತ್ತೇವೋ ಮುಂದೆ ಅದೇ ನಮಗೆ ಹಿಂತಿರುಗಿ ಸಿಗುತ್ತದೆ. ಅದು ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ…”
✍ಉಲ್ಲಾಸ್ ಕಜ್ಜೋಡಿ