ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನಗಳ ಜೀರ್ಣೋದ್ಧಾರ, ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ಅಯ್ಯನಕಟ್ಟೆ ಜಾತ್ರೆಯ ಕುರಿತಾದ ಸಂಗ್ರಾಹಯೋಗ್ಯ ನೆನಪಿನ ಸಂಚಿಕೆ “ಅಯ್ಯನಕಟ್ಟೆ ಜಾತ್ರಾಂತರಂಗ” ಈ ವರ್ಷದ ಅಯ್ಯನಕಟ್ಟೆ ಜಾತ್ರೆಯ ಸಂದರ್ಭದಲ್ಲಿ ಅಧಿಕೃತವಾಗಿ ನಮ್ಮ ಕೈಸೇರಲಿದೆ. ಕೋವಿಡ್ ಕಾರಣದಿಂದ ಮುದ್ರಣಗೊಳ್ಳುವಾಗ ಸ್ವಲ್ಪ ತಡವಾಯಿತು. ನಾಡಿನ ಹೆಸರಾಂತ ಜನಪದ ಸಂಶೋಧಕರು ನೀಡಿದ ಮಾಹಿತಿಪೂರ್ಣ ಲೇಖನಗಳು, ಜಾತ್ರೋತ್ಸವದ ವರದಿ, ಜೀರ್ಣೋದ್ಧಾರ ಕಾರ್ಯಗಳು, ಶ್ರಮಸೇವೆ, ಬ್ರಹ್ಮಕಲಶೋತ್ಸವ, 2020 ರ ಅಯ್ಯನಕಟ್ಟೆ ಜಾತ್ರೆಯ ಚಿತ್ರಗಳನ್ನು ಒಳಗೊಂಡ ಸಂಚಿಕೆಯಿದು. ಜೀರ್ಣೋದ್ಧಾರ ಕಾರ್ಯಗಳಿಗಾಗಿ ₹1000/- ಕ್ಕೂ ಅಧಿಕ ಆರ್ಥಿಕ ನೆರವನ್ನಿತ್ತ ಹಾಗೇ ವಸ್ತುರೂಪದ ನೆರವನ್ನಿತ್ತವರ ವಿವರವೂ ಇದು ಒಳಗೊಂಡಿದೆ. ಸತೀಶ ಕಳಂಜರವರ ವಿನ್ಯಾಸದ ಆಕರ್ಷಕ ಮುಖಪುಟ ಹಾಗೂ ಕಿರಣ್ ಪ್ರಿಂಟರ್ಸ್ ನ ಅಕ್ಷಯ ಪದ್ಯಾಣರವರು ಒಳಪುಟ ವಿನ್ಯಾಸಗೊಳಿಸಿದ್ದಾರೆ. ಈ ಸಂಚಿಕೆಯನ್ನು ಹೊರತರುವಲ್ಲಿ ರಾಮಪ್ರಸಾದ್ ಕಾಂಚೋಡು ಬಹಳಷ್ಟು ಶ್ರಮವಹಿಸಿದ್ದಾರೆ. ಎಲ್ಲ ಲೇಖಕರಿಗೆ, ಜಾಹೀರಾತುದಾರರಿಗೆ ಸಂಪಾದಕ ಮಂಡಳಿಯ ಎಲ್ಲರಿಗೆ ಹಾರ್ದಿಕ ಧನ್ಯವಾದಗಳು. 146 ಪುಟಗಳನ್ನೊಳಗೊಂಡ ಈ ಸಂಚಿಕೆಯ ಮುಖ ಬೆಲೆ ₹ 200/- ಎಲ್ಲರ ಸಹಕಾರವನ್ನು ಕೋರುತ್ತಿದ್ದೇವೆ ಎಂದು ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ತಿಳಿಸಿದ್ದಾರೆ.
- Sunday
- November 24th, 2024