ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ 2022 ನೇ ಸಾಲಿನ ಯುವಸೇವೆ ಹಾಗೂ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಗೆ ಆಯ್ಕೆಯಾಗಿದೆ.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯಾಗಿದ್ದು, ಯುವಸೇವೆ ಮತ್ತು ಕ್ರೀಡೆ ಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ದಲ್ಲಿ ಸಾಂಘಿಕ ಪ್ರಶಸ್ತಿ ಗೆ ಎರಡೇ ಸಂಸ್ಥೆಗಳು ಆಯ್ಕೆ ಆಗಿವೆ. ಇದರಲ್ಲಿ ಪಂಜದ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಕೂಡ ಒಂದಾಗಿದೆ. ಜನವರಿ 30 ರಂದು ವಿಜಯಪುರ ಜಿಲ್ಲೆ ಯ ಮುದ್ದೇಬಿಹಾಳದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸುಳ್ಯ ತಾಲೂಕಿನ ಐವತೊಕ್ಲು ಗ್ರಾಮದ ಸಣ್ಣ ಹಳ್ಳಿಪ್ರದೇಶದ ಯುವಕರಿಂದ ಸಂಘಟಿತರಾಗಿದೆ ಪಂಜದ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್.
ಕ್ರೀಡೆ ಗೆ ಬದ್ಧ, ಸಮಾಜ ಸೇವೆ ಗೂ ಸಿದ್ಧ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಕ್ಲಬ್ ಅನೇಕ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಲಗೋರಿ ಹಾಗೂ ಇನ್ನಿತರ ಕ್ರೀಡೆಯಲ್ಲಿ ಭಾಗವಹಿಸಿ 500 ಕ್ಕೂ ಹೆಚ್ಚು ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ. ಜೊತೆಗೆ ಅನೇಕ ಸಮಾಜಮುಖಿ ಸೇವೆಯನ್ನು ಮಾಡುತ್ತಾ ಬರುತ್ತಿರುವ ಈ ಕ್ಲಬ್ ಪಂಜದ ಅಸುಪಾಸಿಗೆ ಅತೀ ಅಗತ್ಯವಾಗಿರುವ ಜೀವರಕ್ಷಕ ಆಂಬುಲೆನ್ಸ್ ನ್ನು 2020 ನೇ ಇಸವಿಯಲ್ಲಿ ಆರಂಭಿಸಿ 500 ಕ್ಕೂ ಅಧಿಕ ಜನರಿಗೆ ಆಂಬುಲೆನ್ಸ್ ಸೇವೆಯನ್ನು ನೀಡಿದೆ.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಚಾಲಕರು ಜೀರೋ ಟ್ರಾಫಿಕ್ ಇಲ್ಲದೆ ರೋಗಿಯನ್ನು ತುರ್ತು ಆಗಿ 4.30 ಗಂಟೆಗಳಲ್ಲಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆದೊಯ್ಯದಂತಹ ನಿದರ್ಶನಗಳನ್ನು ಹೊಂದಿದೆ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆಂಬುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ನ ಆಂಬುಲೆನ್ಸ್ 24*7 ಸೇವೆಯನ್ನು ಪಂಜದ ಅಸುಪಾಸಿನ ಜನರಿಗೆ ನಿರಂತರ ನೀಡುತ್ತಾ ಬರುತ್ತಿದೆ.
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಮೊದಲನೇ ಹಾಗೂ ಎರಡನೇ ಕೋವಿಡ್ ಅಲೆಗಳಲ್ಲಿ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ತಮ್ಮ ಜೀವದ ಬಗ್ಗೆ ಚಿಂತಿಸದೆ, ಕ್ವಾರೆಂಟೈನ್ ನಲ್ಲಿರುವ ಜನರಿಗೆ ಪಡಿತರ ಸರಬರಾಜು, ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಅಭಿಯಾನ ಹಾಗೂ ಲಾಕ್ಡೌನ್ ಸಮಯದಲ್ಲಿ ಅಗತ್ಯವಾಗಿ ಬೇಕಾಗುವಂತಹ ಔಷಧಿಯನ್ನು ಮನೆಮನೆಗೂ ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ಸೇವೆ ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕೋವಿಡ್ ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದಾಗ, ಪಂಜದಲ್ಲಿ ಇತರ ಸಂಘಗಳ ನೆರವಿನೊಂದಿಗೆ ತುರ್ತು ರಕ್ತನಿಧಿ ಶಿಬಿರವನ್ನು ನಡೆಸಿದೆ. ಒಂದೆರಡು ಗಂಟೆಗಳಲ್ಲಿ ದಾಖಲೆಮಟ್ಟದ 100 ಯುನಿಟ್ಗಿಂತಲೂ ಅಧಿಕ ರಕ್ತ ಸಂಗ್ರಹಿಸಿ ರಕ್ತನಿಧಿಗೆ ನೀಡಲಾಗಿದೆ.
ವರ್ಷಕೊಮ್ಮೆ ಗ್ರಾಮ ಪಂಚಾಯತ್ ನ ನೆರವಿನೊಂದಿಗೆ ಕ್ಲಬ್ ನ ಸದಸ್ಯರು ಹಾಗೂ ಇತರ ಸಂಘಗಳು ಇಡೀ ಗ್ರಾಮ ಪಂಚಾಯತ್ ಪ್ಯಾಪ್ತಿಯನ್ನು ಸ್ವಚ್ಛ ಗೊಳಿಸುತ್ತಿದ್ದಾರೆ. ಪಂಜದ ಗ್ರಾಮ ಪಂಚಾಯತ್ ನ ಮುಕ್ತಿಧಾಮ (ಸ್ಮಶಾನ)ಕ್ಕೆ ವರ್ಷಕ್ಕೆ ಬೇಕಾಗುವ ಕಟ್ಟಿಗೆ ಸಂಗ್ರಹ ಮಾಡುವ ಕರಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ ಹಾಗೂ ಬಡ ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಅನಾರೋಗ್ಯದ ಸಮಸ್ಯೆ ಇದ್ದಾಗ ಧನಸಹಾಯ ವನ್ನು ಮಾಡುವ ಮೂಲಕ ಸೇವೆಯನ್ನು ನೀಡುತ್ತಿದ್ದಾರೆ, ಇದನ್ನೆಲ್ಲ ಗುರುತಿಸಿ ಕರ್ನಾಟಕ ರಾಜ್ಯ ಯುವಸಂಘ ಒಕ್ಕೂಟದಿಂದ ಯುವಸೇವೆ ಹಾಗೂ ಕ್ರೀಡೆಯನ್ನು ಪರಿಗಣಿಸಿ 2022 ನೇ ಸಾಲಿನ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವು ಆಯ್ಕೆಗೊಂಡಿದೆ.