ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ದಿನಾಂಕ 20/01/ 2022 ರಂದು ಸಂಘದ ಆಶ್ರಯದಲ್ಲಿ ಮತ್ತು ನೆಟ್ ಸರ್ಪ್ ಕಂಪನಿ ಸಹಯೋಗದಲ್ಲಿ ವಿಶೇಷ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ರೈತ ಸ್ನೇಹಿತರ ಕೂಟ ಮತ್ತು ಸಾಯ ಎಂಟರ್ ಪ್ರೈಸಸ್ ಪುತ್ತೂರು ಸಹಯೋಗದಲ್ಲಿ ಅಡಿಕೆ ಕೊಯ್ಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೂಸಪ್ಪ ಗೌಡ, ಅಧ್ಯಕ್ಷರು ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟರಮಣ ಭಟ್ ಪವನ, ಮುಖ್ಯ ಸ್ವಯಂ ಸೇವಕರು ರೈತ ಸ್ನೇಹಿತರ ಕೂಟ ಕೋಟೆಮುಂಡುಗಾರು, ಶ್ರೀ ರಾಮಚಂದ್ರ ಭಟ್ ಲೈಂಕಾಜೆ, ಸಾವಯವ ಕೃಷಿ ತರಬೇತುದಾರರು ನೆಟ್ ಸರ್ಪ್ ಕಂಪನಿ, ಶ್ರೀ ಜಯರಾಜ್, ಅಡಿಕೆ ದೋಟಿ ಕೊಯ್ಲು ತರಬೇತುದಾರರು ಸಾಯ ಎಂಟರ್‌ಪ್ರೈಸಸ್ ಇವರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರನ್ನೂ ಸಂಘದ ಅಧ್ಯಕ್ಷರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಪ್ರಗತಿಪರ ಕೃಷಿಕರಾದ ಶ್ರೀ ರಘುರಾಮ ಕೋಟೆ ಉದ್ಘಾಟಿಸಿದರು.
ನಂತರ ಶ್ರೀ ವೆಂಕಟ್ರಮಣ ಭಟ್ ಪವನ ರವರ ತೋಟದಲ್ಲಿ ಅಡಿಕೆ ಕೊಯ್ಲು ಪ್ರಾತ್ಯಕ್ಷಿಕೆ ಮತ್ತು ಅಡಿಕೆ ಮರಗಳಿಗೆ ಕೀಟನಾಶಕ ಸಿಂಪಡಣೆಯನ್ನು ದೋಟಿ ಉಪಯೋಗಿಸಿಕೊಂಡು ಮಾಡುವ ವಿಧಾನವನ್ನು ಶ್ರೀ ಜಯರಾಜ್ ಮತ್ತು ತಂಡ ಸಾಯ ಎಂಟರ್‌ಪ್ರೈಸಸ್ ಇವರು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಊರಿನ ಕೃಷಿಕರು ಇದರ ಮಾಹಿತಿ ಪಡೆದುಕೊಂಡರು. ನಂತರ ನೆಟ್ ಸರ್ಫ್ ಕಂಪನಿ ವತಿಯಿಂದ ಶ್ರೀ ರಾಮಚಂದ್ರ ಭಟ್ ಲೈಂಕಾಜೆ ಇವರು ನ್ಯಾನೋ ತಂತ್ರಜ್ಞಾನದ ದ್ರವ ರೂಪದ ಜೈವಿಕ ಪೋಷಕಾಂಶಗಳ ಬಳಕೆ ಮತ್ತು ಅದರಿಂದಾಗಿ ಕೃಷಿಕರಿಗಾಗುವ ಲಾಭದ ಬಗ್ಗೆ ಮಾಹಿತಿ ನೀಡಿದರು. ರಾಸಾಯನಿಕ ಗೊಬ್ಬರದಿಂದ ಬರಡಾಗುತ್ತಿರುವ ಭೂಮಿಯನ್ನು ನಿಯಂತ್ರಣದಲ್ಲಿಡಲು ಸಾವಯುವ ಕೃಷಿ ಮಹತ್ವದ್ದಾಗಿದ್ದು, ನೆಟ್ ಸರ್ಪ್ ಕಂಪನಿಯು ಇದಕ್ಕೆ ಪೂರಕವಾಗಿ ಪೋಷಕಾಂಶಗಳನ್ನು ಬಯೋಫಿಟ್ ದ್ರವರೂಪದಲ್ಲಿ ಒದಗಿಸುತ್ತಿದೆ. ಇದನ್ನು ಬಳಸುವುದರಿಂದ ಉತ್ತಮ ಕೃಷಿ ಮಾಡಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ವೆಂಕಟ್ರಮಣ ಭಟ್ ಅವರು ಮಾತನಾಡಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಪಡೆದ ಯುವ ರೈತರು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು. ಧನ್ಯವಾದ ಕಾರ್ಯಕ್ರಮವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಡೆಸಿಕೊಟ್ಟರು.