Ad Widget

ಕಳಂಜ ಬಾಳಿಲ ಸಹಕಾರಿ ಸಂಘದಲ್ಲಿ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ 18ರಂದು ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಕೂಸಪ್ಪ ಗೌಡ,ಅಧ್ಯಕ್ಷರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರು ವಹಿಸಿದ್ದರು.

. . . . . . . . .

ಮುಖ್ಯ ಅತಿಥಿಯಾಗಿ ಕೃಷ್ಣ ಕುಂಪದವು, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಸೇವಾ ಪ್ರಮುಖರಾದ ಶ್ರೀ ಸುಭಾಶ್ಚಂದ್ರ ಪಿ.ಬಿ ಅವರು ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.

. . . . . . .

ಬಳಿಕ ಮಾತನಾಡಿದ ಅವರು ಸಹಕಾರ ಕ್ಷೇತ್ರದ ಮೂಲಕ ದೇಶದ ಅರ್ಥವ್ಯವಸ್ಥೆಗೆ ಗುಣಾತ್ಮಕ ಫಲಿತಾಂಶ ನೀಡುವ ಹಿನ್ನೆಲೆಯಲ್ಲಿ ಸಹಕಾರ ಭಾರತಿ ಸಂಸ್ಥಾಪಕ ಲಕ್ಷ್ಮಣರಾವ್ ಇನಾಮ್ದಾರ್ ಅವರ ಮಾರ್ಗದರ್ಶನದಲ್ಲಿ 1978 ಸೆಪ್ಟೆಂಬರ್ 15ರಂದು ಸಹಕಾರ ಭಾರತಿ ಜನ್ಮತಾಳಿತು ಎಂದರು. ಪ್ರತಿವರ್ಷ ಜನವರಿ ತಿಂಗಳ 12 ರಿಂದ 18 ರವರೆಗೆ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆಯನ್ನು ಮಾಡುವುದು, ಸಹಕಾರ ಭಾರತಿ ಸಂಘಟನೆ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು. ಕೃಷ್ಣ ಕುಂಪದವು ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅನನ್ಯ ಎಂದರು. ಸಹಕಾರ ಭಾರತಿ ತಾಲೂಕು ಕಾರ್ಯದರ್ಶಿ ಭಾಸ್ಕರ್ ರಾವ್ ಅವರು ಧನ್ಯವಾದ ನೆರವೇರಿಸಿದರು. ಕಾರ್ಯಕ್ರಮವನ್ನು ಸುದರ್ಶನ ಪಾತಿಕಲ್ಲು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading