ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಾಯಣ ಸಪ್ತಾಹ ಕಾರ್ಯಕ್ರಮ ಜ. 17ರಂದು ಉದ್ಘಾಟನೆಯಾಯಿತು. ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ದೀಪ ಬೆಳಗಿಸಿ ಸಪ್ತಾಹವನ್ನು ಉದ್ಘಾಟಿಸಿದರು. ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿಯವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖ ಸುಭಾಶ್ಚಂದ್ರ ಅಯ್ಯನಕಟ್ಟೆ, ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುಬ್ಬಯ್ಯ ವೈ.ಬಿ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಮುಪ್ಪೇರ್ಯ, ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಉಪಾಧ್ಯಕ್ಷ ರವಿಪ್ರಕಾಶ್ ಮುಪ್ಪೇರ್ಯ, ಸದಸ್ಯ ದಿವಾಕರ ಮುಪ್ಪೇರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಂಗಾರಿ ಮೇಳದ ಅಧ್ಯಕ್ಷ ಲೋಕೇಶ್ ಬೆಳ್ಳಿಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀಮತಿ ರೂಪಾ ಸಾಯಿನಾರಾಯಣ ಪ್ರಾರ್ಥಿಸಿದರು. ಸಿಂಗಾರಿ ಮೇಳದ ಸದಸ್ಯರಾದ ಕು| ಅಶ್ವಿನಿ ಕಲ್ಮಡ್ಕ ಮತ್ತು ಕು|ರಕ್ಷಾ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ಸಿಂಗಾರಿ ಮೇಳದ ಸದಸ್ಯ ರಾಜೇಶ್ ವಂದಿಸಿದರು. ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಶಾಸ್ತ್ರಿ ಎಂ.ಎಸ್ ರಾಮಾಯಣ ಸಪ್ತಾಹವನ್ನು ನಡೆಸಿಕೊಟ್ಟರು. ಸಿಂಗಾರಿ ಮೇಳದ ಸಂಘಟನಾ ಕಾರ್ಯದರ್ಶಿ ರಘುರಾಮ ಕೋಟೆಬನ ಮತ್ತು ತಂಡದವರು ಉದ್ಘಾಟನೆಯ ಸಂದರ್ಭದಲ್ಲಿ ಚೆಂಡೆ ವಾದನದ ನಡೆಸಿಕೊಟ್ಟರು.
ರಾಮಾಯಣ ಸಪ್ತಾಹ ಕಾರ್ಯಕ್ರಮವು ಜ.17ರಿಂದ ಜ.21ರ ತನಕ ಸಂಜೆ 6.00ರಿಂದ 8.00ರ ವರೆಗೆ ನಡೆಯಲಿದೆ.