‘ಯಕ್ಷಗಾನ,ರಂಗಭೂಮಿ,ನೃತ್ಯ,ಸಂಗೀತ,ಜಾದೂ,ಮಕ್ಕಳ ಶಿಬಿರ,ಚಿತ್ರಕಲೆ ಹೀಗೆ ಪ್ರತಿಯೊಂದು ಕಲೆಗೂ ವೇದಿಕೆ ನೀಡುತ್ತಿರುವ ರಂಗಮನೆಯು ಸಾಂಸ್ಕೃತಿಕವಾಗಿ ಬಹಳ ದೊಡ್ಡ ಕೊಡುಗೆ ನೀಡಿದ ಸಂಸ್ಥೆಯಾಗಿದೆ. ನಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಬಹು ಮುಖ್ಯವಾಗಿದೆ ಎಂದು ಹಿರಿಯ ಕಲಾ ಪೋಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಹೇಳಿದರು.
ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ ಶಾಸ್ತ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾಬಲ- ಲಲಿತ ಕಲಾ ಸಭಾ( ರಿ.) ಪುತ್ತೂರು ಇದರ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ ‘ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಮತ್ತು ಆಸ್ವಾದಿಸುವವರಿಗೆ ಸ್ವಚ್ಛ ಮನ ಬೇಕು. ಸುಳ್ಯದ ಈ ರಂಗಮನೆ ಆ ಕೆಲಸವನ್ನು ಮಾಡುತ್ತಿದೆ.’ ಎಂದರು.
ಶ್ರುತಿ- ಲಯ ಸಂಗೀತ ಶಾಲೆ ಬಾಳಿಲ ಇದರ ಗುರುಗಳಾದ ವಿದುಷಿ ಶಂಕರಿಮೂರ್ತಿ ಬಾಳಿಲ ಮತ್ತು ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇದರ ಗಾಯಕರಾದ ಕೆ.ಆರ್.ಗೋಪಾಲಕೃಷ್ಣ ಶುಭಾಶಂಸನೆಗೈದರು.
ಇದೇ ಸಂದರ್ಭ ಮೃದಂಗ ವಾದಕ ವಿದ್ವಾನ್ ಪುತ್ತೂರು ನಿಕ್ಷಿತ್ ರನ್ನು ಸನ್ಮಾನಜಸಲಾಯಿತು.
ರಂಗಮನೆ ರೂವಾರಿ ಜೀವನರಾಂ ಸುಳ್ಯ ಸ್ವಾಗತಿಸಿದರು.
ಕು| ಸುಶ್ಮಿತಾ ಮೋಹನ್ ನಿರೂಪಿಸಿದರು.ರಂಗಮನೆಯ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ವಂದಿಸಿದರು.
ಬಳಿಕ ಬೆಂಗಳೂರಿನ ದಿಂಡೋಡಿ ನಿರಂಜನ್ ಮತ್ತು ಮೈಸೂರು ಸುಮಂತ್ ಮಂಜುನಾಥರಿಂದ ಕಾರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಮತ್ತು ವಯಲಿನ್ ಜುಗಲ್ ಬಂದಿ ನಡೆಯಿತು. ಮೃದಂಗದಲ್ಲಿ ಪುತ್ತೂರು ನಿಕ್ಷಿತ್
ಘಟಂ ನಲ್ಲಿ ವಿದ್ವಾನ್ ಉತ್ತಮ್ ಶಾಂತಾರಾಜು ಸಹಕರಿಸಿದರು.
ಮಾರಣೇದಿನದ ಹಿಂದೂಸ್ತಾನೀ ಸಂಗೀತ ಕಾರ್ಯಕ್ರಮವನ್ನು
ಕಲಾಪೋಷಕರಾದ ಸಿಎ ಗಣೇಶ್ ಭಟ್ ಲಿ.ಇವರು ದೀಪ ಪ್ರಜ್ವಲನ ಮಾಡಿದರು.ನಿವೃತ್ತ ಇಂಜಿನಿಯರ್ ಮತ್ತು ಸಾಹಿತಿಗಳಾದ ಕುಮಾರಸ್ವಾಮಿ ತೆಕ್ಕುಂಜ ಹಾಗೂ ಸುಳ್ಯದ ಸುಸ್ವರ ಸಂಗೀತ ಶಾಲೆಯ ಗುರುಗಳಾದ ಪೂರ್ಣಿಮಾ ಮಡಪ್ಪಾಡಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಾಶಯ ದ ಮಾತುಗಳನ್ನಾಡಿದರು.ಸಂಗೀತ ಗುರು ರಾಘವೇಂದ್ರ ಉಪಾಧ್ಯಾಯರನ್ನು ಸನ್ಮಾನಿಸಲಾಯಿತು.
ರಂಗಮನೆ ಯುವ ಬಳಗದ ಧನ್ಯತಾ ರೈ ಕಾರ್ಯಕ್ರಮ ನಿರೂಪಿಸಿದರು.ರಂಗಮನೆಯ ಡಾ.ವಿದ್ಯಾ ಶಾರದ ವಂದಿಸಿದರು.
ಬಳಿಕ ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಬವಳಾಡಿ ಇವರಿಂದ ಅದ್ಭುತವಾದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ತಬಲದಲ್ಲಿ ಶ್ರೀದತ್ತಗುರು ಮಂಗಳೂರು,ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಸಹಕರಿಸಿದರು.
- Saturday
- November 23rd, 2024