ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಕೊಲ್ಲಮೊಗ್ರು – ಕಟ್ಟ -ಮಾವಿನಕಟ್ಟೆ ಸಂಪರ್ಕ ರಸ್ತೆಯನ್ನು ವಿಶೇಷ ಅನುದಾನ ತರಿಸಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 5.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟೀಕರಣದ ಮೂಲಕ ಈ ಭಾಗದ ಜನರ ಬಹುವರ್ಷದ ಬೇಡಿಕೆಗೆ ಸ್ಪಂದಿಸಿ ಜ.12 ರಂದು ಕಟ್ಟ ಗೋವಿಂದನಗರದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ, ಬಿಜೆಪಿ ಮೋರ್ಚಾದ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಬಿಜೆಪಿ ಜಿಲ್ಲಾ ಓ.ಬಿ.ಸಿ ಘಟಕದ ಕೋಶಾಧಿಕಾರಿ ಮಾಧವ ಚಾಂತಾಳ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಮೋಹಿನಿ ಕಟ್ಟ, ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಗಣ, ಹಿರಿಯರಾದ ನಾರಾಯಣ ಭಟ್ ಕಟ್ಟ, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಕೇಶವ ಕಟ್ಟ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಹಿಮ್ಮತ್.ಕೆ.ಸಿ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ತಿಮ್ಮಪ್ಪ ಗೌಡ ಮಾವಾಜಿ, ಕೊಲ್ಲಮೊಗ್ರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಾಕೇಶ್ ಮುಳ್ಳುಬಾಗಿಲು, ಕೊಲ್ಲಮೊಗ್ರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಉದಯ ಶಿವಾಲ, ಜಯಪ್ರಕಾಶ್ ಕಜ್ಜೋಡಿ, ಕಿಶೋರ್ ಕುಮಾರ್ ಕೂಜುಗೋಡು, ಶರತ್ ಕಲ್ಲೇಮಠ, ಕೊಚ್ಚಿಲ ಶ್ರೀ ಮಯೂರವಾಹನ ದೇವಸ್ಥಾನದ ಅಧ್ಯಕ್ಷರಾದ ಜಯಪ್ರಕಾಶ್ ಕಟ್ಟ, ಕೊಚ್ಚಿಲ ಶ್ರೀ ಮಯೂರವಾಹನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪದ್ಮಯ್ಯ ಹಾಗೂ ಸ್ಥಳೀಯರಾದ ಗಿರೀಶ್ ಮಾವಾಜಿ, ಸುಬ್ರಹ್ಮಣ್ಯ ಕರಂಗಲ್ಲು, ನಾರಾಯಣ.ಪಿ ಮುಳ್ಳುಬಾಗಿಲು, ನವೀನ್ ಕೊಪ್ಪಡ್ಕ, ಉಮೇಶ್ ಕಜ್ಜೋಡಿ, ಮಣಿಯಾನ ಮನೆ ಮೇದಪ್ಪ ಗೌಡ, ಸುರೇಶ್ ಮಿತ್ತಮಜಲು ಹಾಗೂ ಊರವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ