ನೆಟ್ಟಣದ ಕಿದು ಐಸಿಎಆರ್ ಸಿಪಿಸಿಆರ್ ಐ ತೆಂಗು ಸಂಶೋಧನಾ ಕೇಂದ್ರದ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ದ.ಕ.ಜಿಲ್ಲಾ ತೆಂಗು ಉತ್ಪಾದಕರ ಸಂಸ್ಥೆಯ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿಟ್ಲದಲ್ಲಿ ಕೇಂದ್ರ ಕಛೇರಿ ಹೊಂದಿರುವ ದ.ಕ. ಜಿಲ್ಲೆ ಯಲ್ಲಿ ತೆಂಗು ಕೃಷಿಕರಿಗೆಂದೇ ಹುಟ್ಟಿಕೊಂಡ ದ.ಕ. ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆ ಯ ಅಧಿಕೃತ ವೆಬ್ಸೈಟ್ ನ ಬಿಡುಗಡೆ ಯನ್ನು ಭಾರತ ಸರಕಾರದ ಸಂಸ್ಥೆಯಾದ ಐಸಿಎಆರ್ ಸಿಪಿಸಿಆರ್ ಐ ಇದರ ಮುಖ್ಯಸ್ಥರು ಆಗಿರುವ ಅನಿತಾ ಕರುಣ್ ರವರು ಬಿಡುಗಡೆ ಗೊಳಿಸಿದರು ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವಿಜ್ಞಾನಿಗಳಾದ ಡಾ ಯದುಕುಮಾರ್, ಡಾ. ದಿವಾಕರ್, ಡಾ ಹೆಬ್ಬಾರ್,ಡಾ. ನಾಗರಾಜ್, ಡಾ. ನಿರಾಲ್, ತೆಂಗು ರೈತ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸಿಬ್ಬಂದಿ ವರ್ಗದವರು, ರೈತರು ಮತ್ತು ವಿಟ್ಲ ಕಾಸರಗೋಡು ಕಿದು ಸಿಪಿಸಿಆರ್ ಐ ನ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈಗಾಗಲೇ ದ. ಕ ಜಿಲ್ಲಾ ತೆಂಗು ರೈತ ಸಂಸ್ಥೆ ಸುಳ್ಯ ತಾಲ್ಲೂಕಿನಲ್ಲಿ ಮಾಹಿತಿ ಕಛೇರಿ ತೆರೆದಿದ್ದು ಇನ್ನು ಕೆಲವೇ ದಿನಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಕಛೇರಿ ಯನ್ನು ತೆರೆಯಲಿದೆ.
ಇದರ ವೆಬ್ಸೈಟ್
www.coconutfarmers.in
- Thursday
- November 21st, 2024