ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ ಸ್ಪೈರ್ ಅವಾರ್ಡಿಗೆ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿನ ಐದು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಮುರುಳ್ಯ ಗ್ರಾಮದ ನೂಜಾಡಿ ನಿವಾಸಿಗಳಾದ ವೆಂಕಪ್ಪ ಗೌಡ ಮತ್ತು ಶ್ರೀಮತಿ ಕಮಲ ದಂಪತಿಗಳ ಪುತ್ರ ಪವನ್ ಕುಮಾರ್ (10ನೇತರಗತಿ), ಅಲೆಕ್ಕಾಡಿ ಪೂದೆಯ ಶಿವರಾಮ ಮತ್ತು ಶ್ರೀಮತಿ ಜಯಲಕ್ಷ್ಮೀ ದಂಪತಿಗಳ ಪುತ್ರ ಗಗನ್.ಪಿ.(8ನೇ ತರಗತಿ), ಪುಣ್ಚತ್ತಾರು ನಿವಾಸಿಯಾದ ಶ್ರೀಮತಿ ಲೀಲಾವತಿಯವರ ಪುತ್ರ ದೀಪಕ್.ಡಿ.(8ನೇ ತರಗತಿ), ಎಣ್ಮೂರು ಗುತ್ತು ನಿವಾಸಿಗಳಾದ ಕುಂಞಣ್ಣ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ ಪ್ರೇಕ್ಷಾ ರೈ(8ನೇ ತರಗತಿ), ಕರಂಬಿಲ ನಿವಾಸಿಗಳಾದ ಹಸನ್ ಮತ್ತು ಬೀಫಾತಿಮ ದಂಪತಿಗಳ ಪುತ್ರ ಅಫ್ಸಲ್ ಇವರು ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಸಾವಿತ್ರಿ.ಕೆ ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ಮಾದರಿಗಳ/ಯೋಜನೆಯ ಪ್ರಸ್ತಾವನೆಯನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿರುತ್ತಾರೆ.
ಈ ವಿದ್ಯಾರ್ಥಿಗಳು 2021-22 ನೇ ಸಾಲಿನ ‘ಇನ್ ಸ್ಪೈರ್ ಅವಾರ್ಡ್’ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
- Thursday
- November 21st, 2024