ಪಂಚಶ್ರೀ ಯುವಕ ಮಂಡಲ, ಅಕ್ಷತಾ ಯುವತಿ ಮಂಡಲ, ಅಮೃತಾ ಮಹಿಳಾ ಮಂಡಲದ ಜಂಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.2 ರಂದು ಜನಾರ್ಧನ ಬೆಳಗಜೆ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ವಠಾರದಲ್ಲಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಯಾನಂದ ಕೇರ್ಪಳರವರು ಯುವಕ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಶ್ರೀಮತಿ ಹರಿಣಿ ಸದಾಶಿವ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.ಪ್ರತಿಯೊಂದು ಸಂಘ ಸಂಸ್ಥೆಗಳು ಯಶಸ್ವಿಯಾಗಿ ನಡೆಯಬೇಕಾದರೆ ದಾನಿಗಳ ನೆರವು ಮುಖ್ಯ. ಆದರೆ ಕೇಳುವ ಮನಸ್ಸು ಶುದ್ಧವಾಗಿದ್ದರೆ ಮಾತ್ರ ಕೊಡುವಂತ ಕೈಗಳು ಪರಿಶುದ್ಧ ವಾಗಿ ಇರುತ್ತವೆ ಎಂದು ಕಿವಿಮಾತನ್ನು ಹೇಳಿದರು. ಜಾಕೆ ಮಾಧವ ಗೌಡ ಮಾತನಾಡಿ ಸಂಘ ಸಂಸ್ಥೆಗಳಲ್ಲ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕಾದರೆ ವಯಸ್ಸಿನ ಮಿತಿಗಿಂಥ ಮನಸ್ಸಿನ ಮಿತಿ ಬೇಕು ಎಂದು ಹೇಳಿದರು.
ಆದ್ಯ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಜಗದೀಶ ಮಠ ಮತ್ತು ಜಯಂತಿ ಪಂಜದಬೈಲು ಅತಿಥಿಗಳನ್ನು ಪರಿಚಯಿಸಿದರು. ಉಮೇಶ್ ಪಂಜದಬೈಲು ಸ್ವಾಗತಿಸಿ, ಬಾಲಕೃಷ್ಣ ಕೆ ವಂದಿಸಿದರು. ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು.