ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯು ಜ.03 ರಂದು ಗ್ರಾಮಪಂಚಾಯತ್ ಅದ್ಯಕ್ಷ ಉದಯ ಕೊಪ್ಪಡ್ಕ ರವರ ಅಧ್ಯಕ್ಷತೆಯಲ್ಲಿ ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ ಅವರು ಆಗಮಿಸಿದ್ದರು.
ಬೆಂಡೋಡಿಯಲ್ಲಿ ಅಂಗನವಾಡಿ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹಾಗಾಗಿ ಬೆಂಡೋಡಿಯಲ್ಲಿ ಒಂದು ಅಂಗನವಾಡಿಯನ್ನು ನಿರ್ಮಿಸಬೇಕು ಹಾಗೂ ಬೆಂಡೋಡಿ ಶಾಲೆಯಲ್ಲಿ ಛಾವಣಿಯ ಹಂಚು ವಿದ್ಯಾರ್ಥಿಗಳ ಮೇಲೆ ಬೀಳುವಂತಹ ಪರಿಸ್ಥಿತಿ ಇದ್ದು, ಅದ್ದರಿಂದ ಶಾಲೆಯ ಛಾವಣಿಯನ್ನು ಆದಷ್ಟು ಬೇಗ ಸರಿಪಡಿಸಬೇಕು ಹಾಗೂ ಬೆಂಡೋಡಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಒಂದು ಶೌಚಾಲಯ ಇದ್ದು, ಆ ಶೌಚಾಲಯವೂ ಸರಿಯಾಗಿ ಇಲ್ಲದೇ ಇರುವುದರಿಂದ ಆದಷ್ಟು ಬೇಗ ಈಗ ಇರುವ ಶೌಚಾಲಯದ ದುರಸ್ತಿಯ ಜೊತೆಗೆ ಇನ್ನೊಂದು ಶೌಚಾಲಯವನ್ನು ನಿರ್ಮಿಸಬೇಕು. ಪಡಿಕಲ್ಲು ಮತ್ತು ಚಾಂತಾಳದಲ್ಲಿ ಅಣೆಕಟ್ಟು ನಿರ್ಮಾಣ ಮಾಡಬೇಕು. ಈ ನಾಲ್ಕು ಬೇಡಿಕೆಗಳನ್ನು ಆದಷ್ಟು ಬೇಗ ಪೂರೈಸಬೇಕು ಎಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯ ಮಾಧವ ಚಾಂತಾಳ ಆಗ್ರಹಿಸಿದರು.
ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ ಎಂದು ಸುಂದರ ಕಡಂಬಳ ಹೇಳಿದರು. ಗ್ರಾಮಸಭೆ ವರದಿ ಮಂಡನೆಯಾಗಿ ಅನುಮೋದನೆ ಮಾಡದೇ ಸಭೆ ಮುಂದುವರಿಸಿದ್ದಕ್ಕೆ ಬಾಲಸುಬ್ರಮಣ್ಯ ಭಟ್ ಆಕ್ಷೇಪ ವ್ಯಕ್ತಪಡಿಸಿದರು.
ಡೆಂಗ್ಯೂ, ಮಲೇರಿಯಾ ಪರೀಕ್ಷೆಗೆ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕು ಎಂದು ಕೆ.ಪಿ ಗಿರಿಧರ್ ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಗ್ರಾಮಪಂಚಾಯತ್ ಸದಸ್ಯರುಗಳಾದ ಮಾಧವ ಚಾಂತಾಳ, ಪುಷ್ಪರಾಜ್ ಪಡ್ಪು, ಅಶ್ವಥ್ ಯಳದಾಳು, ಮೋಹಿನಿ ಕಟ್ಟ, ಶಿವಮ್ಮ ಕಟ್ಟ, ಶುಭಲತಾ ಕಟ್ಟ, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಹಾಗೂ ಎಲ್ಲಾ ಇಲಾಖೆಯವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ