ಕೊಲ್ಲಮೊಗ್ರು : ಪಡಿಕಲ್ಲು ಕಟ್ಟದ ನೀರಿಗೆ ಬಾಗಿನ ಅರ್ಪಣೆ

ಕೊಲ್ಲಮೊಗ್ರು ಗ್ರಾಮದ ಪಡಿಕಲ್ಲು ಎಂಬಲ್ಲಿ ಕಟ್ಟವನ್ನು ನಿರ್ಮಿಸಿ ಚಾಂತಾಳ ಮತ್ತು ಪಡಿಕಲ್ಲಿಗೆ ನೀರು ಹಾಯಿಸುವಂತಹ ವ್ಯವಸ್ಥೆಯನ್ನು ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ಇಟ್ಟು ನಾಲೆಯಲ್ಲಿ ತುಂಬಿದ್ದ ಹೂಳನ್ನು ಸ್ವಚ್ಛಗೊಳಿಸಿ ಹೂಳು ತುಂಬಿದಂತಹ ಎಲ್ಲಾ ಭಾಗವನ್ನು ಸ್ವಚ್ಛ ಮಾಡಿ ಕಟ್ಟೆ ಕಟ್ಟಿ ನೀರನ್ನು ರೈತರ ತೋಟಗಳಿಗೆ ಹಾಯಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ರೀತಿ ಈ ವರ್ಷ ಕೂಡ ಕಟ್ಟೆ ಕಟ್ಟಿ ನೀರನ್ನು ರೈತರ ತೋಟಗಳಿಗೆ ಹಾಯಿಸುವಂತಹ ವ್ಯವಸ್ಥೆಯನ್ನು ಊರವರ ಸಹಕಾರದಿಂದ ಮಾಡಲಾಯಿತು.
ಪಡಿಕಲ್ಲು ಕಟ್ಟದ ನೀರಿಗೆ ಜ.01 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಾಳ ಅವರು ಬಾಗಿನ ಅರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸತೀಶ್ ದೋಲನ ಮನೆ, ಧರ್ಮಪಾಲ ಚಾಳೆಪ್ಪಾಡಿ, ಗಂಗಾಧರ ಮಿತ್ತೋಡಿ, ಲೋಕೇಶ್ ಚಾಂತಾಳ, ಆನಂದ ಗೌಡ ದೋಲನ ಮನೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading