ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಗೆ ದ.ಕ. ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಮತ ಕ್ಷೇತ್ರದಿಂದ ಸ್ಪರ್ಧಿಸಲು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ನ.16ರಂದು ನಾಮಪತ್ರ ಸಲ್ಲಿಸಿದ್ದಾರೆ. ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಯಲ್ಲಿ ಅವರು ಇಂದು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಮ ಪತ್ರಕ್ಕೆ ನಿತ್ಯಾನಂದ ಮುಂಡೋಡಿ ಹಾಗೂ ಇನ್ನೊಂದಕ್ಕೆ ಎನ್.ಎ. ರಾಮಚಂದ್ರ ಸೂಚಕರಾಗಿ ಬೆಂಬಲ ಸೂಚಿಸಿರುತ್ತಾರೆ. ಗೌಡ ಸಮುದಾಯದ ಪ್ರಮುಖ ನಾಯಕರ ಜೊತೆಗೆ ತೆರಳಿ ನಾಮಪತ್ರ ಸಲ್ಲಿಸಿರುತ್ತಾರೆ.
ರಾಜ್ಯ ಒಕ್ಕಲಿಗರ ಸಂಘದ ದ.ಕ. ಜಿಲ್ಲಾ ಪ್ರತಿನಿಧಿಯಾಗಿ 1977 ರಿಂದಲೇ ಸುಳ್ಯದ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ನಿರಂತರವಾಗಿ 26 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಎ.ಒ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ವಿ.ಜಿ.ಯವರ ಪುತ್ರ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರು ಈ ಸ್ಥಾನವನ್ನು ತುಂಬುತ್ತಿದ್ದು, ಈಗ ಮೂರನೇ ಬಾರಿ ಚುನಾವಣೆಗಾಗಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ ಹಾಗೂ ಮಂಗಳೂರಿನ ಗೌಡ ಸಮುದಾಯದ ಪ್ರಮುಖ ನಾಯಕರೆಲ್ಲರೂ ಉಪಸ್ಥಿತರಿದ್ದು ಬೆಂಬಲವನ್ನು ಸೂಚಿಸಿರುತ್ತಾರೆ. ಪ್ರಮುಖರಾದ ಡಾ. ಜ್ಯೋತಿ ಆರ್. ಪ್ರಸಾದ್, ಎನ್.ಎ. ರಾಮಚಂದ್ರ,ನಿತ್ಯಾನಂದ ಮುಂಡೋಡಿ, ಶ್ರೀ ಭರತ್ ಮುಂಡೋಡಿ, ಎಸ್.ಎನ್. ಮನ್ಮಥ, ಜಾಕೆ ಮಾಧವ ಗೌಡ, ದಿನೇಶ್ ಮಡಪ್ಪಾಡಿ, ಸಂತೋಷ್ ಜಾಕೆ, ವೆಂಕಟ್ ದಂಬೆಕೋಡಿ, ಪಿ.ಸಿ. ಜಯರಾಮ, ಜಯಪ್ರಕಾಶ್ ಕುಂಚಡ್ಕ, ಪುರುಷೋತ್ತಮ ಕೋಲ್ಚಾರು,ದಯಾನಂದ ಕುರುಂಜಿ, ಸಂತೋಷ್ ಕುತ್ತಮೊಟ್ಟೆ, ಪಿ.ಎಸ್. ಗಂಗಾಧರ, ಎಸ್.ಆರ್. ಸೂರಯ್ಯ,ದೊಡ್ಡಣ್ಣ ಬರೆಮೇಲು,ರಾಧಾಕೃಷ್ಣ ಕೋಲ್ಚಾರು, ಡಾ. ಪ್ರಸನ್ನ ಕುಮಾರ್, ಬಾಲಕೃಷ್ಣ ಬೊಳ್ಳೂರು, ಪದ್ಮನಾಭ ಪಾತಿಕಲ್ಲು, ಡಾ. ಮನೋಜ್ ಕುಮಾರ್, ಡಾ. ರೇವಂತ್, ದಿನೇಶ್ ಕೋಲ್ಚಾರು, ಡಾ. ಶಿವಕುಮಾರ್ ಹೆಚ್.ಆರ್. ಡಾ. ಎನ್.ಎ. ಜ್ಞಾನೇಶ್, ಡಾ. ಉಜ್ವಲ್ ಯು.ಜೆ, ಡಾ. ಯಶೋದಾ ರಾಮಚಂದ್ರ, ಚಿದಾನಂದ ಗೌಡ ಬಾಳಿಲ, ಜಯಪ್ರಕಾಶ್ ಕಲ್ಲುಗದ್ದೆ, ದಿನೇಶ್ ಮಡ್ತಿಲ, ಶ್ರೀಕಾಂತ್ ಕುಡೆಕಲ್ಲು, ಆನಂದ ಖಂಡಿಗ, ಬಿ.ಟಿ. ಮಾಧವ, ಭವಾನಿ ಶಂಕರ ಅಡ್ತಲೆ, ನೇತ್ರಾವತಿ ಎಸ್.ಎನ್., ಪ್ರಸನ್ನ ಕಲ್ಲಾಜೆ, ನಾಗೇಶ್ ಕೊಚ್ಚಿ, ಶಿವರಾಮ ಕೇರ್ಪಳ,ವಸಂತ ಕಿರಿಭಾಗ, ಸುರೇಶ್ ಮೂಕಮಲೆ, ಅರುಣ್ ಕುರುಂಜಿ, ಅಜಿತ್ ಕುರುಂಜಿ, ತೀರ್ಥರಾಮ ಕಣಜಾಲು, ವಾಸುದೇವ ಅರಂಬೂರು,ಕುಶಾಲಪ್ಪ ಪೆರುವಾಜೆ, ಕರುಣಾಕರ ಹುದೇರಿ,ಅನೂಪ್ ಬಿಳಿಮಲೆ, ದಯಾನಂದ ಮುಳ್ಯ, ಬಾಲಸುಬ್ರಮಣ್ಯ, ಗಣೇಶ್ ಉಕ್ರಾಜೆ, ಸುಂದರ ಸೇರಾಜೆ, ಸುನಿಲ್ ಕೇರ್ಪಳ, ಬಾಲಪ್ರದೀಪ್ ಕಾಟೂರು, ಕಿಶೋರ್ ಕುಮಾರ್ ಕಜ್ಜೋಡಿ, ವೆಂಕಟೇಶ್ ಪೇರಡ್ಕ, ಮನೋಹರ ಎ.ಎನ್., ಜಯರಾಮ ಬಿ.ಕೆ., ವಿಶ್ವನಾಥ ಕುಂಚಡ್ಕ, ಪುತ್ತೂರು ತಾಲೂಕಿನಿಂದ ಯು.ಪಿ. ರಾಮಕೃಷ್ಣ, ಚಂದ್ರಕಲಾ ಜಯರಾಮ, ಪ್ರವೀಣ್ ಕುಂಟ್ಯಾನ ವಿಟ್ಲದಿಂದ ಲಿಂಗಪ್ಪ ಗೌಡ, ಮೋಹನ ಗೌಡ ಕಾಯರ್‌ಮಾರ್, ಮೋನಪ್ಪ ಗೌಡ, ವಿಶ್ವನಾಥ, ಬೆಳ್ತಂಗಡಿ ತಾಲೂಕಿನಿಂದ ಪದ್ಮನಾಭ ಪಾನತ್ತಿಲ, ಮಂಗಳೂರಿನಿಂದ ಲೋಕಯ್ಯ ಗೌಡ, ಪದ್ಮನಾಭ ದೇವಸ್ಯ, ಪುಂಡರೀಕ ಅರಂಬೂರು, ದಾಮೋದರ ನಾರಾಲು, ಡಿ.ಪಿ. ಸದಾನಂದ, ರಾಮಣ್ಣ ಗೌಡ, ಗುರುಪ್ರಸಾದ್ ಕೈಕಂಬ ಈ ಎಲ್ಲಾ ಪ್ರಮುಖರ ಹಾಗೂ ಬೆಂಬಲಿಗರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ ಮಾತನಾಡಿ ಗೌಡ ಸಮುದಾಯದ ನಾವೆಲ್ಲರೂ ಒಗ್ಗಟ್ಟಾಗಿ ಈ ಚುನಾವಣೆ ಎದುರಿಸಬೇಕು. ಡಾ. ಕುರುಂಜಿ ವೆಂಕಟ್ರಮಣ ಗೌಡರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಗೌಡ ಸಮುದಾಯದ ನಾವೆಲ್ಲರೂ ರಾಜಕೀಯವನ್ನು ಮರೆತು ಪಕ್ಷಬೇದವಿಲ್ಲದೆ ಸಂಘಟಕರಾಗಿ ದುಡಿಯಬೇಕು. ಡಾ. ರೇಣುಕಾ ಪ್ರಸಾದರನ್ನು ಗೆಲ್ಲಿಸಿ, ಆ ಮೂಲಕ ಡಾ. ಕೆ.ವಿ.ಜಿ.ಯವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ಹೇಳಿದರು. ನಾಮಪತ್ರ ಸಲ್ಲಿಸಿದ ಡಾ. ರೇಣುಕಾ ಪ್ರಸಾದ್ ಮಾತನಾಡಿ, ತಂದೆಯವರ ಕಾಲದಲ್ಲಿದ್ದ ಈ ಒಂದು ಕ್ಷೇತ್ರ ಕೊನೆಗೆ ಸದಸ್ಯತ್ವದ ಕೊರತೆಯಿಂದಾಗಿ ಕ್ಯಾನ್ಸಲ್ ಆಗುವ ಸ್ಥಿತಿಯಲ್ಲಿದ್ದಾಗ ಐದು ಸಾವಿರದ ಎಂಟುನೂರು ಸದಸ್ಯರನ್ನು ನಾನು ಕೈಯಿಂದಲೇ ಖರ್ಚು ಮಾಡಿ ಸದಸ್ಯತ್ವವನ್ನು ಮಾಡಿಸಿ ಕ್ಷೇತ್ರವನ್ನು ಉಳಿಸಿಕೊಂಡಿರುತ್ತೇನೆ. ಈ ಭಾಗದ ನಮ್ಮ ಬಡ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಒಕ್ಕಲಿಗರ ಸಂಘದ ಮೂಲಕ ಅನೇಕರಿಗೆ ಸಹಕಾರ ಮಾಡಿರುತ್ತೇನೆ.ನಿಮ್ಮೆಲ್ಲರ ಸಹಕಾರ ಪ್ರೀತಿ ನನ್ನ ಜೊತೆಗಿದ್ದರೆ ಮುಂದೆ ಕೂಡಾ ನಾನು ಇಂತಹ ಸೇವೆಯನ್ನು ಸಲ್ಲಿಸಲು ಬದ್ದನಾಗಿರುತ್ತೇನೆ ಎಂದು ತಿಳಿಸಿದರು. ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ನಮ್ಮ ಸಮುದಾಯದಿಂದ ಆಗಮಿಸಿದ ಎಲ್ಲಾ ನಾಯಕರನ್ನು ಗಮನಿಸಿದಾಗ ನಮ್ಮ ಶಕ್ತಿ ಏನು ಎಂಬುದು ಮನದಟ್ಟಾಗಿದೆ. ಇದೇ ರೀತಿ ನಾವು ಮುಂದುವರಿಯಬೇಕು. ಒಕ್ಕಲಿಗರ ಸದಸ್ಯತ್ವವನ್ನು ಮಾಡುವಲ್ಲಿ ನಾನು ಕೂಡ ಒಂದಷ್ಟು ಕೈಜೋಡಿಸಿರುತ್ತೇನೆ ಎಂದು ಶುಭ ಹಾರೈಸಿದರು. ಭವಾನಿಶಂಕರ ಅಡ್ತಲೆ ವಂದಿಸಿದರು.