ಆರಿತು ದೊಡ್ಮನೆಯ ದೀಪ ಕನ್ನಡಿಗರ ಹೃದಯ ಬೆಳಗಿದ ನಂದಾದೀಪ.
ಬಾಳಿನ ಹಾದಿಯಲಿ ಕಗ್ಗತ್ತಲು ಕವಿಯಿತು
ಸ್ಫೂರ್ತಿಯ ಚಿಲುಮೆಯು ಬತ್ತಿಹೋಯಿತು.
ನಯ ವಿನಯದ ಮಾತುಗಳು ಕೇಳಿಸುತ್ತಿಲ್ಲ
ಆ ನಗು ಮುಖದಲ್ಲಿದ್ದ ತೇಜಸ್ಸು ಇಂದಿಲ್ಲ.
ನೃತ್ಯದ ಕೈ-ಕಾಲುಗಳು ಇಂದು ನರ್ತಿಸುತ್ತಿಲ್ಲ
ಹೃದಯದ ಹಾಡು ಹಾಡುವ ಕೋಗಿಲೆಯು ಇನ್ನಿಲ್ಲ.
ಆಕಾಶದೆತ್ತರಕ್ಕೆ ಹೊಸ ಕನಸು ಬಿತ್ತಿದ ಕುವರ
ಕನ್ನಡಿಗರ ಪ್ರೀತಿಯ ಅಪ್ಪು.ಈ ರಾಜಕುಮಾರ.
ಪ್ರತಿದಿನ ಅಭಿಮಾನಿಗಳೇ ದೇವರು ಎನ್ನುತ್ತಿದ್ದವ ನೀನು
ಇಂದೇಕೆ ಯಾರಿಗೂ ಹೇಳದೆ ದೇವರ ಪಾದ ಸೇರಿದೆ ನೀನು?.
ಫಲ ನೀಡಲಿಲ್ಲ ಅಭಿಮಾನಿಗಳ ಪ್ರಾರ್ಥನೆಯು
ಹೆಚ್ಚಾಗಿರಬೇಕು ದೇವರಿಗೂ ನಿನ್ನ ಮೇಲಿನ ಪ್ರೀತಿಯು.
ನೀ ನೊಂದವರಿಗೆ ನೆರವಾಗುತ್ತಿದ್ದ ಹೃದಯವಂತ
ನಿನಗೆ ಹೇಗಾಯಿತು..? ಈ ಹೃದಯಾಘಾತ.
ಎತ್ತರ ವೆತ್ತರಕ್ಕೆ ಯಶಸ್ಸು ಸಿಗಲೆಂದು ಬಯಸಿದೆವು ನಾವು
ಫೋಟೊ ಕಟೌಟ್ ಗಳಿಗೆ ಹಾಲಿನ ಅಭಿಷೇಕವ ಮಾಡಿದೆವು.
ನಮಗಾಗ ತಿಳಿಯಲಿಲ್ಲ ಆಗಸದೆತ್ತರಕ್ಕೆ ಹಾರುವಿರೆಂದು
ನಮ್ಮೆಲ್ಲರ ಈ ಜಗದಲ್ಲಿ ಬಿಟ್ಟು ಎಂದೂ ಬಾರದ ಲೋಕವ ಸೇರುವಿರೆಂದು.
ನೀವಿಲ್ಲದೇ ಬಡವಾಯಿತು ಚಿತ್ರರಂಗ
ಕಂಬನಿ ಮಿಡಿಯುತ್ತಿದೆ ನಿಮಗಾಗಿ ಕರುನಾಡಿಗರ ಅಂತರಂಗ.
ನೀವು ಇನ್ನಿಲ್ಲವೆಂಬ ಮಾತು ನಂಬಲಾಗುತ್ತಿಲ್ಲ
ದೇವರ ಆಟಕ್ಕೆ ತಲೆಬಾಗದೆ ವಿಧಿಯಿಲ್ಲ.
ಮತ್ತೆ ಹುಟ್ಟಿ ಬನ್ನಿ.. ನಮ್ಮ ಕರುನಾಡಿನಲ್ಲಿ..
ಕನ್ನಡಿಗರ ಮನೆಮಗನಾಗಿ ಮನೆಮನೆಗಳಲ್ಲಿ.
ಓಂ ಶಾಂತಿ.. ಓಂ ಶಾಂತಿ..
ನಿಮ್ಮ ಆತ್ಮಕ್ಕೆ ಸಿಗಲಿ ಚಿರಶಾಂತಿ..
✍ಧನಂಜಯ ಕೆ. ಕೊಡೆಂಕೇರಿ