ಅಮರ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಒಕ್ಕೂಟ ಸಭೆ ಅ.28 ರಂದು ಗಿರಿಜನ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಮರ ಸಂಜೀವಿನಿ ಒಕ್ಕೂಟದ ಅದ್ಯಕ್ಷರಾದ ರವಿಕಲಾ ಚೆಮ್ನೂರು ವಹಿಸಿದ್ದರು. ಸಭೆಯಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ಹಾಗೂ NRGY ಕೋ-ಆರ್ಡಿನೇಟರ್ ನಮಿತಾ, ಗುತ್ತಿಗಾರು ಗ್ರಾಮಪಂಚಾಯತ್ ಅದ್ಯಕ್ಷರಾದ ರೇವತಿ ಆಚಳ್ಳಿ, ಶ್ರೀಮತಿ ತೇಜಕುಮಾರಿ, ಒಕ್ಕೂಟ ಕಾರ್ಯದರ್ಶಿ ಜಯಲಕ್ಷ್ಮಿ, MBIS ಮಿತ್ರಕುಮಾರಿ ಚಿಕ್ಮುಳ್ಳಿ, LCRP ಶಾರದಾ.ಎನ್.ಕೆ, ದಿವ್ಯಾ ಚತ್ರಪ್ಪಾಡಿ, ಅಭಿಲಾಷ ಉಪಸ್ಥಿತರಿದ್ದರು.
“ಮಹಿಳಾ ದೌರ್ಜನ್ಯದ ತಡೆ” ವಿಷಯದ ಬಗ್ಗೆ ಶ್ವೇತಾ ಹಾಗೂ NRG ಯೋಜನೆಯ ಬಗ್ಗೆ ನಮಿತಾ ಇವರು ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ “ಲಕ್ಷ ಕಂಠಗಳ ಕನ್ನಡ ಗೀತ-ಗಾಯನ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅಭಿಲಾಷ ಅವರು ನಿರೂಪಿಸಿ, ಚಿಗುರು ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ