ನೆಲ್ಲೂರು ಕೆಮ್ರಾಜೆ: ಜಿರ್ಮುಕಿ- ಬೊಳ್ಳಾಜೆ ಕೆಸರು ಮಯ ರಸ್ತೆಯ ಕುರಿತ ಅಮರ ಸುದ್ದಿ ವರದಿಗೆ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮರ್ ಎರ್ಮೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸೇವಾಜೆ ಸೇತುವೆ ದುರಸ್ತಿಯ ಹಿನ್ನಲೆ ಈ ರಸ್ತೆಯ ವಾಹನ ಸಂಚಾರ ದುಪ್ಪಟ್ಟಾದ ಕಾರಣ ರಸ್ತೆ ಕೆಸರುಮಯವಾಗಿತ್ತು. ಇದರ ತಾತ್ಕಾಲಿಕ ದುರಸ್ತಿಯನ್ನು ಅ. 24 ರಂದು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಶ್ರಮದಾನ ಮಾಡುವ ಮೂಲಕ ಮಾಡಿ ರಸ್ತೆ ಸಂಚಾರ ಸುಗಮಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮೊದಲು ಮಂದ್ರಪ್ಪಾಡಿ ರಸ್ತೆಯೂ ಕೆಸರುಮಯವಾಗಿ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ಇದನ್ನು ಪಂಚಾಯತ್ ವತಿಯಿಂದ ದುರಸ್ತಿಗೊಳಿಸಲಾಗಿದೆ. ರಸ್ತೆಗಳ ಅಭಿವೃದ್ಧಿ ಗೆ
ಜಿ.ಪಂ. ಹಾಗೂ ಸಚಿವರ ಅನುದಾನಗಳು ಹಂತ ಹಂತವಾಗಿ ಬರುತ್ತಿದ್ದು ರಸ್ತೆ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. 2 ರಿಂದ 3 ಕೋಟಿ ಅನುದಾನದ ಅಗತ್ಯವಿದ್ದು ಅದರ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ.
ಅನುದಾನ ಮಂಜೂರಾದಂತೆ ಹಂತ ಹಂತವಾಗಿ ರಸ್ತೆಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುವುದು. ೧೫ ವರ್ಷಗಳ ಹಿಂದೆ ಇದ್ದ ರಸ್ತೆಯ ಪರಿಸ್ಥಿತಿ ಈಗ ಇಲ್ಲ. ಈ ಆಡಳಿತ ಅವಧಿಯಲ್ಲಿ ನಾವು ಮಾಡಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು ಅದರಂತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಗ್ರಾಮಸ್ಥರ ಸಹಕಾರವೂ ಅಗತ್ಯ: ಸ್ಥಳಿಯರು ಮಳೆಗಾಲದ ಸಂದರ್ಭ ಗ್ರಾಮದ ರಸ್ತೆಯ ಮಾಡಿ ನೀರಿನ ಹರಿವು ಸುಗಮವಾಗಿ ರಸ್ತೆ ಕೆಡದಂತಿರಲು ಗ್ರಾಮಸ್ಥರೂ ಸಹಕಾರ ನೀಡಬೇಕು. ಜನರ ಸಹಕಾರವಿಲ್ಲದೇ ಪಂಚಾಯತ್ ನಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಇದು ಗುಡ್ಡಗಾಡು ಗ್ರಾಮವಾದ ಕಾರಣ ವಿಪತ್ತು ನಿರ್ವಹಣೆಯ ಪಂಚಾಯತ್ ಫಂಡ್ ಇಲ್ಲಿ ಕೊರತೆ ಉಂಟಾಗಿದೆ.ಹೆಚ್ಚಿನ ಫಂಡ್ ಗಾಗಿ ಸರಕಾರಕ್ಕೆ ಮನವಿ ಮಾಡಲಾಗಿದೆ. ಸರಕಾರ ಈ ಫಂಡ್ ನೀಡಿದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.