Ad Widget

ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಜಿಪಿ ಪ್ರವೀಣ್ ಸೂದ್ ಬೇಟಿ – ಡ್ರಗ್ಸ್ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ -ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಭರವಸೆ

ಸುಬ್ರಹ್ಮಣ್ಯ: ನಾಗಾರಾಧನ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಮನೆಯವರೊಂದಿಗೆ ರವಿವಾರ ಬೇಟಿ ನೀಡಿದರು.
ಕ್ಷೇತ್ರಕ್ಕೆ ಬೇಟಿ ನೀಡಿದ ಅವರು ಕ್ಷೇತ್ರದಲ್ಲಿ ಆಶ್ಲೇಷ ಬಲಿ, ಅಭಿಷೇಕ ಸೇವೆ ನೆರವೇರಿಸಿ ಮಹಾಪೂಜೆಯಲ್ಲಿ ಪಾಲ್ಗೊಂಡರು. ನಾಗಪ್ರತಿಷ್ಠೆ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು, ಶ್ರೀ ಹೊಸಳಿಗಮ್ಮನ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪ್ರವೀಣ್ ಸೂದ್ ಪತ್ನಿ, ಮಗಳು, ಅಳಿಯ ಕ್ರಿಕೇಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜತೆಯಲ್ಲಿದ್ದರು. ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಉಪಸ್ಥಿತರಿದ್ದರು.

. . . . . . .

ಡ್ರಗ್ಸ್ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದೆ; ಪ್ರವೀಣ್ ಸೂದ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಳೆದ ಎರಡು ವರ್ಷದಲ್ಲಿ ವಿಶೇಷ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಇಂತಹ ಕ್ರಮಕೈಗೊಂಡಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ ಸೇರಿದಂತೆ ಪ್ರಮುಖ ನಗರಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಡ್ರಗ್ಸ್ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದು ಹೇಳಿದರು.
ಅವರು ರವಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿಷಯ ತಿಳಿಸಿದರು. ಡ್ರಗ್ಸ್ ಬಗ್ಗೆ ಅರಿವು ಕಾರ್ಯಕ್ರಮವನ್ನು ಮಾದ್ಯಮಗಳು ಮಾಡಬೇಕಾಗಿದೆ. ಆದಾಗ ಜನರಿಗೂ ತಿಳುವಳಿಕೆ ಬರುತ್ತದೆ. ಪೊಲೀಸ್ ಇಲಾಖೆ ವತಿಯಿಂದಲೂ ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಜತೆಗೆ ಇಂತಹ ಪ್ರಕರಣದಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಕಳೆದ ಜುಲೈನಲ್ಲಿ ೫೦ ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಎಂದರು.
ಜೀವನದಲ್ಲಿ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತದೆ. ಅಸಮಾಧಾನ ಇರಬೇಕು. ಅಸಮಾಧಾನ ಇದ್ದಲ್ಲಿ ಮಾತ್ರವೇ ಜೀವನದಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ಹಿಂದೆ ಕಾನ್ಸ್ಟೇಬಲ್ ಗಳು ೨೦ ವರ್ಷಗಳ ಬಳಿಕ ಭಡ್ತಿ ಪಡೆಯುತ್ತಿದ್ದರು, ಈಗ ೮-೧೦ ವರ್ಷಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಅಂದು ಕಾನ್ಸ್ಟೇಬಲ್ ಹೆಡ್‌ಕಾನ್ಸ್ಟೇಬಲ್ ಆಗಿ ನಿವೃತ್ತರಾಗುತ್ತಿದ್ದರೆ, ಇಂದು ಶೇ.೯೦ರಷ್ಟು ಕಾನ್ಸ್ಟೇಬಲ್‌ಗಳು ಎಎಸೈ ಆಗಿ ಕೆಲವರು ಪಿಎಸೈ ಆಗಿ ನಿವೃತ್ತರಾಗುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಸರಕಾರದ ವತಿಯಿಂದ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಭಡ್ತಿ ವಿಚಾರ ಜಾಸ್ತಿ ಇದೆ. ಕಾಲಾಂತರದಲ್ಲಿ ಭಡ್ತಿ ಹಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಡ್ತಿಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಪ್ರಶ್ನೆಗೆ ಅವರು ಉತ್ತರಿಸಿದರು.
ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಎಲ್ಲ ಕ್ರಮಕೈಗೊಳ್ಳುತ್ತಿದೆ. ಇಲಾಖೆ ವತಿಯಿಂದ ಏನೂ ಮಾಡಬೇಕೋ ಅದನ್ನು ಇಲಾಖೆ ಮಾಡಲಿದೆ ಎಂದರು. ಮಂಗಳೂರಿನ ಎಸ್ಪಿ ಕಛೇರಿ ಪುತ್ತೂರಿಗೆ ಸ್ಥಳಾಂತರಿಸುವ ಬಗೆಗಿನ ಪ್ರಶ್ನೆಗೆ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬಹುದು ಎಂದರು.

ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಎಲ್ಲ ಕ್ರಮಕೈಗೊಳ್ಳುತ್ತಿದೆ. ಇಲಾಖೆ ವತಿಯಿಂದ ಏನೂ ಮಾಡಬೇಕೋ ಅದನ್ನು ಇಲಾಖೆ ಮಾಡಲಿದೆ ಎಂದರು. ಮಂಗಳೂರಿನ ಎಸ್ಪಿ ಕಛೇರಿ ಪುತ್ತೂರಿಗೆ ಸ್ಥಳಾಂತರಿಸುವ ಬಗೆಗಿನ ಪ್ರಶ್ನೆಗೆ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬಹುದು ಎಂದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಖಾಸಗಿ ಬೇಟಿ ಇದಾಗಿದ್ದು, ಆದರೆ ಇಲ್ಲಿ ಬಂದಿದ್ದರಿಂದ ಅಧಿಕಾರಿಗಳೊಂದಿಗೆ ಪಶ್ಚಿಮ ವಲಯಕ್ಕೆ ಸಂಬಧಿಸಿದಂತೆ ಸಮಸ್ಯೆ, ಏನೇನು ಸೂಚನೆಗಳಿವೆ ಎಂಬ ಬಗ್ಗೆ ಇಲಾಖೆಯ ಕುರಿತು ಕೂಲಂಕುಶವಾಗಿ ಚರ್ಚಿಸಿದ್ದೇನೆ. ಮುಂದಕ್ಕೆ ನಾನು ಸದ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಪೊಲೀಸ್ ಇಲಾಖೆಯ ಸಭೆ ನಡೆಸಲಿದ್ದೇನೆ ಎಂದರು. ಪಶ್ಚಿಮ ವಲಯ ಪೊಲೀಸ್ ನಿರೀಕ್ಷಕ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಿ ಸೋನಾವಣೆ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಠಾಣೆ ಅಭಿವೃದ್ಧಿಗೆ ಪ್ರಯತ್ನ;
ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಎಸ್ಪಿ ಅವರು ಪ್ರಸ್ತಾವಣೆ ಸಲ್ಲಿಸಿದ್ದಾರೆ. ಇವತ್ತು ಕ್ಷೇತ್ರಕ್ಕೆ ಆಗಮಿಸಿದ ವೇಳೆಯೂ ದೇವಳದ ಆಡಳಿತದವರು ಸೇರಿ ಹಲವರು ನನ್ನ ಗಮನಕ್ಕೆ ಈ ಬಗ್ಗೆ ತಂದಿದ್ದಾರೆ. ದಾರಿಯಲ್ಲಿ ಹೋಗುವಾಗ ಪೊಲೀಸ್ ಠಾಣೆಯನ್ನು ಗಮನಿಸಿದ್ದೇನೆ, ಚಿಕ್ಕದಾಗಿದ್ದು, ಹಳೆಯದಾಗಿದುವುದು ಗಮನಕ್ಕೆ ಬಂದಿದೆ. ಸದ್ಯದಲ್ಲೇ ಸರಕಾರದ ವತಿಯಿಂದ ಹೊಸ ಕಟ್ಟಡ ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!