ಅಮರ ಪಡ್ನೂರು ಹಾಗೂ ಅಮರ ಮುಡ್ನೂರು ಗ್ರಾಮದ ಜನರಿಗಿರುವ ಸಮಸ್ಯೆಗಳನ್ನು ಆಯಾ ಇಲಾಖೆಗಳ ಮೂಲಕ ಸರಿ ಮಾಡಲಾಗುವುದು. ಜನರು ಈ ಗ್ರಾಮ ವಾಸ್ತವ್ಯದ ಸಂಪೂರ್ಣ ಸದುಪಯೋಗವನ್ನು ಮಾಡಿಕೊಡಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.
ಅಮರ ಮುಡ್ನೂರು ಗ್ರಾ.ಪಂ. ನಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಡೀಮ್ಡ್ ಫಾರೆಸ್ಟ್, ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಎಸ್.ಎಸ್ಸಿ ಎಸ್.ಟಿ. ಕಾಲನಿ ಗಳ ಸಮಸ್ಯೆ ಹಾಗೂ ಕಡತ ವಿಲೇವಾರಿಯ ಕುರಿತು ಇಂದಿನ ಗ್ರಾಮ ವಾಸ್ತವ್ಯದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಂದು ಬಂದ ಅರ್ಜಿಗಳ ಕುರಿತು ಅ.29- 30 ರಂದು ಪುನರ್ ಪುನರ್ ಪರಿಶೀಲನೆ ಮಾಡಲಾಗುವುದು ಎಂದರು.ಸಚಿವ ಎಸ್. ಅಂಗಾರ ಹಾಗೂ ಜಿಲ್ಲಾಧಿಕಾರಿ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪದ್ಮಪ್ರಿಯಾ ಮೆಲ್ತೋಡಿ, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಡಿಡಿಎಲ್ ಆರ್ ನಿರಂಜನ್ ಎಂ.ಎಲ್ ,ತಾಲೂಕು ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿ ವರ್ಗ , ಅಮರ ಮಡ್ನೂರು ಗ್ರಾ.ಪಂ. ಸದಸ್ಯರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಸಹಾಯಕ ಆಯುಕ್ತ ಯತೀಶ್ ಉಲ್ಲಾಳ್ ಸ್ವಾಗತಿಸಿ ತಾ.ಪಂ. ಎಇ ಭವಾನಿಶಂಕರ್ ಎನ್ . ವಂದಿಸಿದರು.