ಬೆಳ್ಳಾರೆ ಗ್ರಾಮದ ದರ್ಖಾಸು ಬಳಿಯ ಚೀಮುಳ್ಳು ಎಂಬಲ್ಲಿ ಕ್ಷಯ ರೋಗದಿಂದ ಬಳಲುತ್ತಿದ್ದ ಓರ್ವ ವ್ಯಕ್ತಿಗೆ ಸೂಕ್ತ ಸೂರು ವ್ಯವಸ್ಥೆ ಮತ್ತು ಊಟ ಉಪಾಹಾರದ ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮನಗಂಡ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿಯವರು ಡಾ।। ಎಸ್ ನಾರಾಯಣ್ ಭಟ್ ಬೆಳ್ಳಾರೆ ಪ್ರತಿಷ್ಠಾನದ ನೆರವಿನ ಅಂಬ್ಯುಲೆನ್ಸ್ ಮೂಲಕ ರೋಗಿಯನ್ನು ಮಂಗಳೂರು ಮೂಡುಶೆಡ್ಡೆ ಎದೆರೋಗಗಳ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಸ್ ನ ಅಧ್ಯಕ್ಷ ಜೇಸಿ ಪದ್ಮನಾಭ ಕಲಾಸುಮ ರೋಗಿಯ ವೈಯಕ್ತಿಕ ವೆಚ್ಚಕ್ಕಾಗಿ ಜೇಸಿಸ್ ವತಿಯಿಂದ ಆರ್ಥಿಕ ನೆರವನ್ನು ನೀಡಿದರು. ಡಾ।।ಎಸ್. ನಾರಾಯಣ್ ಭಟ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜೇಸಿ ಕೇಶವಚಂದ್ರ ಮಿತ್ರ ಬೆಳ್ಳಾರೆ, ಪ್ರತಿಷ್ಠಾನದ ಸದಸ್ಯ ಹಾಗೂ ಅಂಬ್ಯುಲೆನ್ಸ್ ವಾಹನ ಚಾಲಕ ಸದಾಶಿವ ಮಣಿಯಾಣಿ ಉಪಸ್ಥಿತರಿದ್ದು ಸೂಕ್ತ ವ್ಯವಸ್ಥೆ ಮಾಡಿದರು.