*ಶೇಕಡಾ 8.5 ಡಿವಿಡೆಂಡ್ ಘೋಷಣೆ*
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020 – 21 ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.08ರಂದು ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಉಮೇಶ್ ಕಾರ್ಯಸೂಚಿ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ನಾಯಕ್ ಕಾರ್ಯಸೂಚಿಗಳ ವಿವರಣೆ ನೀಡಿದರು. 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಕೈ ಸೇರಿದ್ದು ಸಂಘಕ್ಕೆ ವರದಿ ವರ್ಷದಲ್ಲಿ ರೂ.52,37,508.54 ನಿವ್ವಳ ಲಾಭ ಬಂದಿರುತ್ತದೆ. ಸಾಲ ಮರುಪಾವತಿ ಪ್ರಮಾಣವು ಶೇಕಡಾ 96.85 ರಷ್ಟು ಆಗಿದ್ದು ಈ ಸಾಲಿನ ಅಡಿಟ್ ವರ್ಗೀಕರಣ ‘ಎ’ ತರಗತಿಯಲ್ಲಿರುತ್ತದೆ. ಸಂಘವು 2020-21ನೇ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ 8.5% ಡಿವಿಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ನಿರ್ದೇಶಕರಾದ ಎನ್. ವಿಶ್ವನಾಥ ರೈ, ಕೆ.ಅಜಿತ್ ರಾವ್, ಬಿ.ಸುಭಾಶ್ಚಂದ್ರ ರೈ, ಭಾರತೀಶಂಕರ.ಎ, ಮೇದಪ್ಪ ಗೌಡ.ಟಿ, ಕರುಣಾಕರ ಶೆಟ್ಟಿ.ಎನ್, ಸುಬ್ರಹ್ಮಣ್ಯ.ಕೆ.ಎಲ್, ಶುಭಕುಮಾರ.ಬಿ, ವಿಶ್ವನಾಥ ಪರವ, ಶ್ರೀಮತಿ ಎ.ಪುಷ್ಪಾವತಿ, ಶ್ರೀಮತಿ ಪಂಕಜಾಕ್ಷಿ.ಎಂ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶ್ರೀಮತಿ ಗೀತಾ ನಿರೂಪಿಸಿದರು.