ಆರಂತೋಡು ಗ್ರಾಮದ ಪಿಂಡಿಮನೆ ಕುಟುಂಬದ ದೈವಸ್ಥಾನದ ಬಳಿ ಜಿಲ್ಲಾ ಪಂಚಾಯತ್ ನ 2.5ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಬಿ. ಜೆ. ಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅ.5 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆರಂತೋಡು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಯ ಸದಸ್ಯೆ ಶ್ರೀಮತಿ ಸುಜಯ ಲೋಹಿತ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಮೇದಪ್ಪ ಉಳುವಾರು, ಸುಳ್ಯ ಮಂಡಲ ಬಿ. ಜೆ. ಪಿ. ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಮಂಡಲ ಸಮಿತಿ ಸದಸ್ಯೆ ಭಾರತಿ ಪುರುಷೋತ್ತಮ, ಅಡ್ತಲೆ ಬೂತ್ ಅಧ್ಯಕ್ಷ ಲೋಹಿತ್ ಮೇಲೆ ಅಡ್ತ ಲೆ, ಪಿಂಡಿಮನೆ ಕುಟುಂಬ ಹಿರಿಯರಾದ ಮಾಧವ ಗೌಡ ಮತ್ತು ಪಿಂಡಿಮನೆ ಕುಟುಂಬಸ್ಥರು ಹಾಗೂ ಊರವರು ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆರಂತೋಡು ಶಕ್ತಿ ಕೇಂದ್ರ ಪ್ರಮುಖ ಕೇಶವ ಅಡ್ತಲೆ ಸ್ವಾಗತಿಸಿ, ಅಡ್ತಲೆ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ ವಂದಿಸಿದರು.
- Thursday
- November 21st, 2024