ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ವತಿಯಿಂದ ಗಾಂಧಿ ಜಯಂತಿ ಆಚರಣೆಯನ್ನು ಚೆಡಾವು ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಮಾಚಯ್ಯ, ಸಹಾಯಕ ಉಪ ನಿರೀಕ್ಷಕರು ಸಂಪಾಜೆ ಪೊಲೀಸ್ ಹೊರ ಠಾಣೆ, ಇವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.ಪ್ರಾಸ್ತಾವಿಕವಾಗಿ ಮಾತಾನಾಡಿದ ಶ್ರೀ ಪಿ.ಎಲ್ ಸುರೇಶ್ ,ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಯುವಕ ಮಂಡಲದ ಕುರಿತು ಮಾಹಿತಿ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಎಸ್.ಇ ಮಹಮ್ಮದ್ ಕುಂಞ ಸ್ಥಾಪಕಾಧ್ಯಕ್ಷರು ಜೈ ಹಿಂದ್ ಯುವಕ ಮಂಡಳ “ಭಾರತದ ಆಡಳಿತ ಹಾಗೂ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ತತ್ವಗಳು” ಈ ಕುರಿತು ಮಾತಾನಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀ ನವೀನ್ ಕುಮಾರ್ ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಶ್ರೀ ಮಲ್ಲಿಕಾರ್ಜುನ ಪಿ, ಆಡಳಿತಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ, ಶ್ರೀಮತಿ ಸಿಲ್ವಿಯಾ ಮೊಂತೆರೋ ಕೊಯನಾಡು, ಶ್ರೀಮತಿ ಕುಸುಮಾವತಿ ಅಂಗನವಾಡಿ ಕಾರ್ಯಕರ್ತೆ, ಶ್ರೀ ಪಿ.ಕೆ ಇಸ್ಮಾಯಿಲ್ , ವರ್ತಕರು ಚೆಡಾವು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇತಾಜಿ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ಹೆಚ್.ಬಿ ವಹಿಸಿದ್ದರು.ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಮತ್ತು ಅಂಗನವಾಡಿ ಕೇಂದ್ರಕ್ಕೆ ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು.ನಂತರ ಚೆಡಾವು ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಶ್ರೀಮತಿ ಸರೋಜ ಸುಂದರ ಸ್ವಾಗತಿಸಿ, ಶ್ರೀ ಅಶ್ವಿನ್ ವಂದಿಸಿ, ಶ್ರೀ ಸಂತೋಷ್ ಕುಮಾರ್ ಹೆಚ್.ಬಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಾರ್ವಜನಿಕರು,ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು.
- Sunday
- November 24th, 2024