ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಶ್ರೀಮತಿ ರಾಜೀವಿ ಎಂ. ಸುದೀರ್ಘ ಸೇವೆ ಸಲ್ಲಿಸಿ ಆ.31 ರಂದು ಸ್ವಯಂ ನಿವೃತ್ತರಾದರು. 1985 ರಿಂದ ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕದಲ್ಲಿ ಸೇವೆ ಆರಂಭಿಸಿದ ಇವರು ಒಂದೇ ಶಾಲೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಲಾ ಜೀವನದಲ್ಲಿ ವಾಲಿಬಾಲ್,ಬ್ಯಾಡ್ಮಿಂಟನ್, ತ್ರೋಬಾಲ್,ಗುಂಡೆಸೆತ,ಚಕ್ರ ಎಸೆತ, ಮುಂತಾದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ವೃತ್ತಿ ಜೀವನದಲ್ಲೂ ವಿದ್ಯಾರ್ಥಿಗಳನ್ನು ವಾಲಿಬಾಲ್, ಶಟ್ಲು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟಗಳಲ್ಲಿ ಭಾಗವಹಿಸುವಂತೆ ಹಾಗೂ ಗುಂಡೆಸೆತ ಮತ್ತು ಚಕ್ರ ಎಸೆತಗಳಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಲು ಶ್ರಮಿಸಿದ್ದಾರೆ.
ಇವರು ಬಾಳಿಲ ಗ್ರಾಮದ ಮೊರೆಂಗಾಲ ಉಕ್ಕಣ್ಣ ಗೌಡ – ತಿಮ್ಮಕ್ಕ ದಂಪತಿಗಳ ಪುತ್ರಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಬಾಳಿಲದ ವಿದ್ಯಾಬೋಧಿನಿ ಶಾಲೆಯಲ್ಲಿ ಪಡೆದು, ಸಿ.ಪಿ.ಎಡ್ ನ್ನು ಬೆಂಗಳೂರಿನ ವೈಎಂಸಿಎ ಕಾಲೇಜಿನಲ್ಲಿ ಪಡೆದಿರುತ್ತಾರೆ. ಇವರ ಪತಿ ಮಡಪ್ಪಾಡಿ ಶಿವರಾಮ ದೂರವಾಣಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಇವರ ಮಗಳು ಚೈತ್ರಾ ಮಡಪ್ಪಾಡಿ, ಅಳಿಯ ಅವಿನಾಶ್ ಕುರುಂಜಿಯವರು. ಚೈತ್ರಾರವರು ಚಕ್ರ ಎಸೆತದಲ್ಲಿ ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಮಗ ಚೇತನ್ ಮಡಪ್ಪಾಡಿ ಸುಳ್ಯದ ಕೆ.ವಿ.ಜಿ ಇಂಜಿನಿಯರಿಂಗ್ ಮೆಕಾನಿಕಲ್ ಇಂಜಿನಿಯರ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಸೊಸೆ ಶ್ವೇತಾ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊಮ್ಮಕ್ಕಳಾದ ವಾಗ್ಮಿ ಮಡಪ್ಪಾಡಿ,ಹೃತ್ವಿ ಮಡಪ್ಪಾಡಿ ಯವರೊಂದಿಗೆ ನೆಲೆಸಿದ್ದಾರೆ.