ಜೇಸಿಐ ಬೆಳ್ಳಾರೆ,ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ಜಂಟಿ ಆಶ್ರಯದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ರಂಗ ತರಬೇತಿಗೆ ಕರ್ನಾಟಕ ಸರ್ಕಾರದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಆ.29ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಪ್ರಧಾನಿಯವರ ಆಶಯದಂತೆ ಭಾರತವನ್ನು ಕ್ಷಯಮುಕ್ತ ಭಾರತ-2025 ಮಾಡಲು ಜೇಸಿಐ ಬೆಳ್ಳಾರೆ ಹಾಗೂ ಆರೋಗ್ಯ ಇಲಾಖೆ ಸುಳ್ಯ ಕ್ಷಯ ಮುಕ್ತ ಭಾರತ ಮಾಡಲು ವಿಶೇಷ ಜಾಗೃತಿ ಮೂಡಿಸಲು ಕಿರುಚಿತ್ರ ರೂಪಿಸುತ್ತಿರುವುದು ಶ್ಲಾಘನೀಯ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಜಾಗೃತಿ ತಲುಪಲಿ ಎಂದು ಹೇಳಿ ತನ್ನ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿ, ಕಿರುಚಿತ್ರ ತಂಡದ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಕ್ಷಯ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿ ಪ್ರಾಸ್ತಾವಿಕ ಮಾತನಾಡಿ ಪ್ರಧಾನಿಯವರ ಆಶಯದಂತೆ ಕ್ಷಯ ಮುಕ್ತ ಭಾರತ ಕಿರುಚಿತ್ರಕ್ಕೆ ಯೋಜನೆ ರೂಪಿಸಿರುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು. ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಜೇಸಿ ಜಯರಾಮ ಉಮಿಕ್ಕಳ ಸ್ವಾಗತಿಸಿ, ಜೇಸಿ ಲೋಕೇಶ್ ತಂಟೆಪ್ಪಾಡಿ ವಂದಿಸಿದರು. ಈ ಸಂದರ್ಭದಲ್ಲಿ ತರಬೇತುದಾರ ಕೃಷ್ಣಪ್ಪ ಬಂಬಿಲ, ನಾಟಕ ರಚನೆಕಾರ ಸತೀಶ್ ಕಕ್ಕೆಪದವು, ಜೇಸಿ ಪೂರ್ವಾಧ್ಯಕ್ಷ ಜೇಸಿ ಪ್ರಸಾದ್ ಸೇವಿತ, ಕಾರ್ಯದರ್ಶಿ ಜೇಸಿ ಜಗದೀಶ ರೈ ಪೆರುವಾಜೆ, ಖಜಾಂಜಿ ಜೇಸಿ ನಿರ್ಮಲಾ ಜಯರಾಂ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.