ಕ್ರೀಡಾ ಭಾರತೀ ಸುಳ್ಯ ಘಟಕದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಆ.29 ರಂದು ಸುಳ್ಯ ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾ ಭಾರತೀ ಅಧ್ಯಕ್ಷರಾದ ಎ.ಸಿ.ವಸಂತ ಅಮಚೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ|ಹರಿಪ್ರಸಾದ್ ತುದಿಯಡ್ಕ, ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷರಾದ ದೊಡ್ಡಣ್ಣ ಬರೆಮೇಲು, ಸುಬ್ರಹ್ಮಣ್ಯ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಕೆ .ಯಂ. ನಿರೂಪಿಸಿದರು. ಮಂಜುನಾಥ್ ಎ.ಯು. ಸ್ವಾಗತಿಸಿ, ರಂಗನಾಥ್ ಸುಳ್ಯ ವಂದಿಸಿದರು. ಜಯಪ್ರಕಾಶ್ ಕುಡೆಕಲ್ ಬಹುಮಾನ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಪ್ರಬಂಧ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿವೆ,
ಪ್ರಾಥಮಿಕ ಶಾಲಾ ವಿಭಾಗ- ಪ್ರಥಮ : ಜನನಿ ಸ.ಕಿ.ಪ್ರಾ. ಶಾಲೆ ಮೂವಪ್ಪೆ ಕೊಡಿಯಾಲ, ದ್ವಿತೀಯ: ಸ್ವಸ್ತಿಕ್ ಸ.ಕಿ.ಪ್ರಾ.ಶಾಲೆ ಮೂವಪ್ಪೆ ಕೊಡಿಯಾಲ , ತೃತೀಯ: ಸಾಧನ್ ಮಾವಾಜಿ ಕೆ.ವಿ.ಜಿ.ಸುಳ್ಯ ಪ್ರೋತ್ಸಾಹಕ ಬಹುಮಾನ: ಶಾನ್ವಿ ಚಂದ್ರ ಜ್ಞಾನಗಂಗಾ ಬೆಳ್ಳಾರೆ, ನೇಸರ್ ಸೈಂಟ್ ಬ್ರಿಜೀಡ್ ಸುಳ್ಯ, ಕೃತಿ ಐವರ್ನಾಡು, ಜಿವಿತ ಸೈಂಟ್ ಜೋಸೆಫ್ ಸುಳ್ಯ, ಮನ್ವಿತ್ ಸೈಂಟ್ ಬ್ರಿಜೀಡ್ ಸುಳ್ಯ,
ಪ್ರೌಢಶಾಲೆ ವಿಭಾಗ-ಪ್ರಥಮ: ದಿಶಾ ಬಾಳಿಲ, ದ್ವಿತೀಯ: ದಿಶಾ ಆಲೆಟ್ಟಿ ತೃತೀಯ:ಭೂಮಿಕ ಸೋಣಂಗೇರಿ ಪ್ರೋತ್ಸಾಹಕ ಬಹುಮಾನ-ಇಂಚರ ಸೈಂಟ್ ಜೋಸೆಫ್ ಸುಳ್ಯ,ಅವನಿ ಶಾರದಾ ಸುಳ್ಯ, ಪ್ರಜ್ವಲ್ ಜೂನಿಯರ್ ಕಾಲೇಜು ಸುಳ್ಯ, ಮೋಕ್ಷ ರೋಟರಿ ಸುಳ್ಯ, ದೀಕ್ಷಾ ಜ್ಞಾನಗಂಗ ಬೆಳ್ಳಾರೆ.
ಪದವಿಪೂರ್ವ ಕಾಲೇಜು ವಿಭಾಗ-ಪ್ರಥಮ:ಸಾದ್ವಿ ಮಾವಾಜಿ, ದ್ವಿತೀಯ:ಸಂಹಿತಾ, ತೃತೀಯ:ಅಬೀಜ್ಞ, ಪ್ರೋತ್ಸಾಹಕ ಬಹುಮಾನ :ಪಂಚಮಿ ಕೆ., ಕಾವ್ಯ ಪಿ, ಜಸ್ಮಿತ.ಕೆ.
ಸಾರ್ವಜನಿಕ ವಿಭಾಗ-ಪ್ರಥಮ:ಶೃತಿ ಸುಬ್ರಹ್ಮಣ್ಯ, ದ್ವಿತೀಯ-ಮಹೇಶ್ ಕೊಯಿಂಗಾಜೆ, ತೃತೀಯ-ವಾಣಿ.ಪಿ.ಜಿ., ಪ್ರೋತ್ಸಾಹಕ ಬಹುಮಾನ- ಚಂದ್ರಾಕ್ಷಿ, ತಾರಾ.ಪಿ.ಆರ್, ಅದಿತಿ.ಕೆ.ಕೆ. ಸಾವಿತ್ರಿ. ಬಿ.