Ad Widget

ಸಚಿವ ಎಸ್. ಅಂಗಾರರಿಂದ ಮೇದಿನಡ್ಕದಲ್ಲಿ ನೂತನ ಅಂಗನವಾಡಿ ಉದ್ಘಾಟನೆ

ದೇಶದ ಏಳಿಗೆಗೆ ಜನರ ಸಹಕಾರ ಅಗತ್ಯವಾಗಿದೆ. ಅವಶ್ಯಕವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಗಮನಕ್ಕೆ ತರಬೇಕು. ಆಗ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಅರಿವು ನಮಗಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.
ಅಜ್ಜಾವರದ ಮೇದಿನಡ್ಕದಲ್ಲಿ ಆ. 29 ರಂದು ನೂತನ ಅಂಗನವಾಡಿ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

. . . . .

ಸಚಿವರನ್ನು ಬಾಲವಿಕಾಸ ಸಮಿತಿ ಮೇದಿನಡ್ಕ, ಅಜ್ಜಾವರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಾಕಿರ ಪರವಾಗಿ ಮತ್ತು ಶ್ರೀ ನಿಧಿ ಸ್ರೀ ಶಕ್ತಿ ಶಂಘದ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಉಪಾಧ್ಯಕ್ಷೆ ಲೀಲಾಮನಮೊಹನ್, ತಾ. ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ,ಸಿಡಿಪಿಓ ರಶ್ಮಿ ಅಶೋಕ್ ,ಮೇಲ್ವಿಚಾರಕಿ ಶೈಲಾಜ ರಘನಾಥ್ , ರವಿರಾಜ್ ಕರ್ಲಾಪ್ಪಾಡಿ, ದಿವ್ಯ ಜಯರಾಮ್ , ಅಬ್ದಲ್ಲ, ಶ್ವೇತ ಪುರುಷೋತ್ತಮ, ದಯಾಳ್ ಮೇದಿನಡ್ಕ , ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ನವೀನ್ ರೈ ಮೇನಾಲ, ಸಬೋದ್ ಶೆಟ್ಟಿ ಮೇನಾಲ, ಕಮಲಾಕ್ಷ ರೈ, ಆನಂದ ರಾವ್ ,ಸೀತಾರಾಮ ಕರ್ಲಪ್ಪಾಡಿ ,ಪ್ರಬೊದ್ ಶೆಟ್ಟಿ ಮೇನಾಲ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು‌ ಉಪಸ್ಥಿತರಿದ್ದರು.

ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿ
ವಿನೋದ್ ಮೇದಿನಡ್ಕ ಧನ್ಯವಾದ ಅರ್ಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!