ಜೇಸಿಐ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ ಸುಳ್ಯ ನೇತೃತ್ವದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ಕಿರು ಚಿತ್ರದ 5ನೇ ದಿನದ ರಂಗ ತರಬೇತಿ ಶಿಬಿರಕ್ಕೆ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್. ಬಿ ಭೇಟಿ ಮಾಡಿ ಜೇಸಿಯ ಕಿರು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಹಿಮಲೇಶ್ವರಿ ಉಪಸ್ಥಿತರಿದ್ದರು.
ಜೇಸಿ ಅಧ್ಯಕ್ಷರಾದ ಜೇಸಿ ಪದ್ಮನಾಭ ಕಲಾಸುಮ ಸ್ವಾಗತಿಸಿ, ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿ ವಂದಿಸಿದರು. ಜೇಸಿ ನಿಕಟಪೂರ್ವ ಅಧ್ಯಕ್ಷ ಜೇಸಿ ವೀರನಾಥ್ ಕಲ್ಲೋಣಿ, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ, ನಾಟಕ ರಚನೆಗಾರ ಸತೀಶ್ ಕಕ್ಕೆಪದವು , ಕಿರು ಚಿತ್ರದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.