
ಸುಬ್ರಹ್ಮಣ್ಯದ ಕುಮಾರಧಾರ ಬಳಿ ಕೊಲ್ಲಮೊಗ್ರದ ಕಾರ್ತಿಕ್ ಪೈಕ ಮಾಲಕತ್ವದ ಕಾರ್ತಿಕೇಯ ಅಟೋ ವರ್ಕ್ಸ್ ಇಂದು ಶುಭಾರಂಭಗೊಂಡಿತು. ಪರಮೇಶ್ವರ ಗೌಡ ಪೈಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಕಾಂಪ್ಲೆಕ್ಸ್ ಮಾಲಕ ಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದು ಶುಭಹಾರೈಸಿದರು. ಎಲ್ಲಾ ಕಂಪನಿಯ ದ್ವಿಚಕ್ರ ರಿಪೇರಿ ಮಾಡಿಕೊಡಲಾಗುವುದು ಹಾಗೂ ಬಿಡಿಭಾಗಗಳು ದೊರೆಯುತ್ತದೆ ಎಂದು ಕಾರ್ತಿಕ್ ಪೈಕ ತಿಳಿಸಿದ್ದಾರೆ.