ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯೂ ಎಸಿ ಘಟಕ ಮತ್ತು ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕ ಇದರ ಸಹಯೋಗದೊಂದಿಗೆ ಆ. 25 ರಂದು ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು ಎಂಬ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದ ಎನ್ ಎಸ್ ಇವರು ವಹಿಸಿ, ಸೇನೆ ಉದ್ಯೋಗವನ್ನು ನೀಡುತ್ತದೆ. ರಾಷ್ಟ್ರಪ್ರೇಮ ಹಾಗೂ ಮಾನವೀಯತೆಯನ್ನು ತಿಳಿಸಿಕೊಡುತ್ತದೆ ಎಂಬ ಸಂದೇಶವನ್ನು ನೀಡಿದರು. ಕಾರ್ಯಕ್ರಮವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ರಾದ ಶ್ರೀಮತಿ ವನಜಾ ವಿ. ಭಟ್ ಇವರು ಉದ್ಘಾಟಿಸಿ, ಸೇನೆಗೆ ಸೇರಿಕೊಳ್ಳಲು ಇಷ್ಟೊಂದು ಯುವಕ ಮತ್ತು ಯುವತಿಯರು ಆಸಕ್ತರಾಗಿರುವುದು ಶ್ಲಾಘನೀಯ ಎಂದು ನುಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಹಾವಿದ್ಯಾಲಯದ ಪೂರ್ವ ವಿದ್ಯಾರ್ಥಿಗಳಾದ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ರಾಧಾಕೃಷ್ಣ ಹಾಗೂ ನಾಗಾಲ್ಯಾಂಡ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ಶೋಭಾ ಗಿರಿಧರ್ ಮತ್ತು ಎಚ್.ಆರ್ & ಪ್ಲೇಸ್ ಮೆಂಟ್ ಘಟಕದ ವಿದ್ಯಾರ್ಥಿ ಪ್ರತಿನಿಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕದ ಸಂಯೋಜಕರಾದ ವಿನ್ಯಾಸ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಮಹಾವಿದ್ಯಾಲಯ ಐಕ್ಯೂ ಎಸಿ ಘಟಕದ ಸಂಯೋಜಕರಾದ ಡಾ. ಪ್ರಸಾದ್ ಎನ್. ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಕುಮಾರ್ ಎಸ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಆರತಿ ಕೆ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸಂಧ್ಯಾ ಪ್ರಾರ್ಥಿಸಿದರು.
✍ವರದಿ :- ಉಲ್ಲಾಸ್ ಕಜ್ಜೋಡಿ