ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಬಾಳಿಲ ಸುಭಾಶ್ಚಂದ್ರ ರೈ ತೋಟ ಮಾಲಕತ್ವದ ರಸಗೊಬ್ಬರ ಮತ್ತು ಕ್ರಿಮಿನಾಶಕ ವಿತರಕ ಕೇಂದ್ರ ಶ್ರೀ ದೇವಿ ಎಂಟರ್‌ಪ್ರೈಸಸ್ ಆ.24ರಂದು ಶುಭಾರಂಭಗೊಂಡಿತು.
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಕಛೇರಿ ಉದ್ಘಾಟಿಸಿ ಮಾತನಾಡಿ, ರೈತರಿಗೆ ಬೇಕಾದ ಎಲ್ಲಾ ರೀತಿಯ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಪೂರೈಸುವ ಗ್ರಾಮೀಣ ಭಾಗದ ಒಂದು ಉತ್ತಮ ಕೇಂದ್ರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಗೂ ಉದ್ಯಮಿ ಸವಣೂರು ಸೀತಾರಾಮ ರೈಯವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕ ಪೂರೈಸುವ ಸಂಸ್ಥೆಯ ಅವಶ್ಯಕತೆ ಇತ್ತು ಅದನ್ನು ಯುವಕರ ತಂಡ ಕುಂಬ್ರದಲ್ಲಿ ಆರಂಭಿಸಿದೆ ಮುಂದಿನ ದಿನಗಳಲ್ಲಿ ಇದರ ಪ್ರಯೋಜನ ಎಲ್ಲಾ ರೈತರಿಗೆ ಸಿಗಲಿ ಎಂದು ಹೇಳಿದರು. ರಸಗೊಬ್ಬರ ಗೋದಾಮು ಅನ್ನು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹೀಮಾನ್ ಹಾಜಿಯವರು ಮಾತನಾಡಿ, ರೈತರಿಗೆ ಬಹಳ ಪ್ರಯೋಜನಕಾರಿಯಾದ ಈ ಶ್ರೀದೇವಿ ಎಂಟರ್‌ಪ್ರೈಸಸ್ ಮುಂದಿನ ದಿನಗಳಲ್ಲಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಮಿ ಗ್ರೂಪ್‌ನ ಮಾಲಕರು, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ, ಪದ್ಮಶ್ರೀ ಸೋಲಾರ್ ಸಂಸ್ಥೆಯ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಮಂದಾರ ಸಂಕೀರ್ಣದ ಮಾಲಕ, ನಟ ಸುಂದರ ರೈ ಮಂದಾರ, ಕೃಷಿಕರುಗಳಾದ ನಾರಾಯಣ ರೈ ಬಾರಿಕೆ, ಶ್ಯಾಮ್ ಸುಂದರ್ ರೈ ಕೊಪ್ಪಳ, ಪ್ರೇಮ್‌ರಾಜ್ ರೈ ಪರ್ಪುಂಜ, ಅರುಣ್ ರೈ ಬಿಜಳ, ನಿವೃತ್ತ ಶಿಕ್ಷಕ, ನಿತಿನ್ ರೈ ಕುಕ್ಕುವಳ್ಳಿಯವರ ತಂದೆ ನಾರಾಯಣ್ ರೈ ಕುಕ್ಕುವಳ್ಳಿ ಇನ್ನಿತರ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಶ್ರೀ ದೇವಿ ಎಂಟರ್‌ಪ್ರೈಸಸ್‌ನ ಮಾಲಕ ನಿತಿನ್ ರೈ ಕುಕ್ಕುವಳ್ಳಿ, ಕೆ.ಕೌಶಿಕ್ ರೈ ತೋಟ ಬಾಳಿಲ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.
ಶ್ರೀದೇವಿ ಎಂಟರ್‌ಪ್ರೈಸಸ್ ಒಂದು ಸಂಪೂರ್ಣ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಕೇಂದ್ರವಾಗಿದೆ. ಇಲ್ಲಿ ರೈತರಿಗೆ ಬೇಕಾದ ಎಲ್ಲಾ ಬಗೆಯ ಗೊಬ್ಬರಗಳು, ಕೀಟನಾಶಕಗಳು ದೊರೆಯುತ್ತದೆ. ಇದಲ್ಲದೆ ರೈತರ ಜಮೀನಿಗೆ ತೆರಳಿ ನುರಿತ ತಜ್ಞರಿಂದ ಮಣ್ಣು ಪರೀಕ್ಷೆ ಮಾಡಿಸಿ ಆ ಮಣ್ಣಿಗೆ ಸೂಕ್ತವಾದ ರಸಗೊಬ್ಬರಗಳನ್ನು ಪೂರೈಕೆ ಮಾಡುವ ವ್ಯವಸ್ಥೆ ಇಲ್ಲಿದೆ. ಮಣ್ಣು ಪರೀಕ್ಷೆ ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುತ್ತದೆ. ಗ್ರಾಹಕರು ಸಹಕಾರ ನೀಡಬೇಕಾಗಿ ವಿನಂತಿ. ಹೆಚ್ಚಿನ ವಿವರಗಳಿಗೆ ಮೊ.9353352791 ಅಥವಾ 9448625441 ಗೆ ಸಂಪರ್ಕಿಸಬಹುದಾಗಿದೆ.
ಬಿ.ಸುಭಾಶ್ಚಂದ್ರ ರೈ ತೋಟ ಬಾಳಿಲ, ಮಾಲಕರು.