Ad Widget

ಮಂಗಳೂರು ವಿ.ವಿ. ಸಂಧ್ಯಾ ಕಾಲೇಜಿನಿಂದ ಅನಿಂದಿತ್ ಅವರಿಗೆ “ಲೆಟರ್ ಆಫ್ ಅಪ್ರಿಸಿಯೇಶನ್”

ಮಂಗಳೂರು ವಿ.ವಿ.‌ ಸಂಧ್ಯಾ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಯುವಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಭಾಗವಹಿಸಿದ್ದರು.

“ಸ್ವಾತಂತ್ರ್ಯ ಸಮರದಲ್ಲಿ ನಮ್ಮವರು” ಎಂಬ ವಿಷಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ 1857 ರಿಗಿಂತ ಇಪ್ಪತ್ತು ವರ್ಷಗಳ ಹಿಂದೆಯೇ ಭಾರತದಲ್ಲಿ, ಅದು ಕೂಡ ಈ ಭಾಗದಲ್ಲಿ ನಡೆದ ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿ.ವಿ. ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದು ಬ್ರಿಟಿಷರ ಕಾಲದಿಂದಲೂ ರೂಢಿಯಲ್ಲಿದ್ದ “ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನು ದರೋಡೆಕೋರರು” ಎಂದು ಬಿಂಬಿಸುವುದು ವಾಡಿಕೆಯಾಗಿತ್ತು, ಅದರೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ನಡೆದ ಅವರೆಲ್ಲರೂ ನಿಜಾರ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂಬ ಸ್ಪಷ್ಟನೆಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು.

ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರಿಗೆ ಮಂಗಳೂರು ವಿ.ವಿ. ಸಂಧ್ಯಾ ಕಾಲೇಜು “ಲೆಟರ್ ಆಫ್ ಅಪ್ರಿಸಿಯೇಷನ್’ ನೀಡಿ ಗೌರವಿಸಿದೆ.

ಮಂಗಳೂರು ವಿ.ವಿ. ಸಂಧ್ಯಾ ಕಾಲೇಜಿನ ಅಧಿಕೃತ ಯೂಟ್ಯೂಬ್ ಪೇಜ್ ನಲ್ಲಿ ಕಾರ್ಯಕ್ರಮದ ರೆಕಾರ್ಡಿಂಗ್ ಅನ್ನು ವೀಕ್ಷಿಸಬಹುದಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!